2023-24 ವಿತ್ತೀಯ ವರ್ಷದಲ್ಲಿ13.12 ಕೋಟಿ ಲಾಭ ದಾಖಲಿಸಿದ ಎಂಸಿಸಿ ಬ್ಯಾಂಕ್: ಕರ್ನಾಟಕ ರಾಜ್ಯಕ್ಕೆ ಕಾರ್ಯಕ್ಷೇತ್ರ ವಿಸ್ತರಣೆ; ಕಾವೂರು, ಬೆಳ್ತಂಗಡಿ ಮತ್ತು ಶಿವಮೊಗ್ಗದಲ್ಲಿ ಹೊಸ ಶಾಖೆ ಪ್ರಾರಂಭ

ಮಂಗಳೂರು: ಕರ್ನಾಟಕದ ಸಹಕಾರಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ 112 ವರ್ಷಗಳ ಇತಿಹಾಸವಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಎಮ್.ಸಿ.ಸಿ ಬ್ಯಾಂಕ್ (MCC) ಲಿಮಿಟೆಡ್ 31 ಮಾರ್ಚ್ 2024 ರಂದು ಮುಕ್ತಾಯಗೊಂಡ ವಿತ್ತೀಯ ವರ್ಷದಲ್ಲಿ ಲೆಕ್ಕ ಪರಿಶೋಧನಾ ಪೂರ್ವ 13.12 ಕೋಟಿ ರೂಪಾಯಿ ವ್ಯವಹಾರಿಕ ಲಾಭಗಳಿಕೆಯನ್ನು ದಾಖಲಿಸಿದೆ ಹಾಗೂ ಸತತವಾಗಿ ಎನ್.ಪಿ.ಎ. ಪ್ರಮಾಣವನ್ನು ಕಡಿಮೆಗೊಳಿಸಲು ಬ್ಯಾಂಕ್‌ ಶ್ರಮಿಸುತ್ತಿದ್ದು, ಇತ್ತೀಚಿನವರ್ಷಗಳಲ್ಲಿ ಪ್ರಪ್ರಥಮ ಬಾರಿಗೆ 1.07% ಎನ್.ಪಿ.ಎ. ದಾಖಲಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೋ ಹೇಳಿದರು. ಅವರು ಶುಕ್ರವಾರದಂದು ಸೆನೆಟ್ […]

ಮಂಗಳೂರು: ಎಂಸಿಸಿ ಬ್ಯಾಂಕ್ ವತಿಯಿಂದ ಮಹಿಳಾ ದಿನಾಚರಣೆ

ಮಂಗಳೂರು: ಎಂಸಿಸಿ ಬ್ಯಾಂಕಿನ (MCC Bank) ಪ್ರಧಾನ ಕಛೇರಿಯಲ್ಲಿ ಬ್ಯಾಂಕಿನ ಮಹಿಳಾ ಸಿಬಂದಿಯ ನಿಸ್ವಾರ್ಥ ಸೇವೆಯನ್ನು ಸ್ಮರಿಸಿ ಮಾ.9 ರಂದು ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ವೈಟ್ ಡೌವ್ಸ್ ಸಂಸ್ಥೆಯ ಸಂಸ್ಥಾಪಕಿ ಕೋರಿನ್ ರಸ್ಕಿನ್ಹಾ ಹಾಜರಿದ್ದರು. ಬ್ಯಾಂಕಿನ ನಿರ್ದೇಶಕಿಯರಾದ ಐರಿನ್ ರೆಬೆಲ್ಲೊ, ಡಾ. ಫ್ರೀಡಾ ಪ್ಲಾವಿಯ, ಡಿಸೋಜ, ಶರ್ಮಿಳಾ ಮಿನೇಜಸ್, ಬ್ಯಾಂಕಿನ ಶಾಖಾ ಪ್ರಬಂಧಕರಾದ ಬ್ಲಾಂಚ್ ಫೆರ್ನಾಂಡಿಸ್, ಸುನಿತಾ ಡಿಸೋಜ, ಐಡಾ ಪಿಂಟೊ, ಐರಿನ್ ಡಿಸೋಜ, ಜೆಸಿಂತಾ ಫೆರ್ನಾಂಡಿಸ್, ವಿಲ್ಮಾ ಜ್ಯೋತಿ ಸಿಕ್ವೇರಾ ಮತ್ತುಅನಿತಾ […]

ಬ್ರಹ್ಮಾವರ ಎಂ.ಸಿ.ಸಿ ಬ್ಯಾಂಕ್ ನ 17 ನೇ ಶಾಖೆ ಉದ್ಘಾಟನೆ: ಸಾರವಜನಿಕರ ಸಹಕಾರದಿಂದ ಸಹಕಾರಿ ರಂಗ ಮುನ್ನಡೆ: ಯಶ್ ಪಾಲ್ ಸುವರ್ಣ

ಬ್ರಹ್ಮಾವರ: ರಾಜ್ಯದ ಅಗ್ರಗಣ್ಯ ಸಹಕಾರಿ ಬ್ಯಾಂಕುಗಳಲ್ಲಿ ಒಂದಾಗಿರುವ ಎಂ.ಸಿ.ಸಿಬ್ಯಾಂಕಿನ 17 ನೇ ಶಾಖೆಯು ಬ್ರಹ್ಮಾವರದ ಶೇಷಗೋಪಿ ಪ್ಯಾರಡೈಸ್‌ನ ನೆಲಮಹಡಿ, ಆಕಾಶವಾಣಿ ವೃತ್ತದ ಬಳಿ, ಮಿನಿ ವಿಧಾನಸೌಧದ ಹತ್ತಿರ, ವಾರಂಬಳ್ಳಿಯಲ್ಲಿ ಮಾ. 3 ರಂದು ಉದ್ಘಾಟನೆಗೊಂಡಿತು. ಹೊಸ ಶಾಖೆಯ ಉದ್ಘಾಟನೆಯನ್ನು ಶಾಸಕ ಯಶ್ಪಾಲ್ ಸುವರ್ಣ ನೆರವೇರಿಸಿ ಮಾತನಾಡಿ, ಬ್ರಹ್ಮಾವರದಲ್ಲಿ ಶಾಖೆಯನ್ನು ತೆರೆದು ಸಾರ್ವಜನಿಕರಿಗೆ ಬ್ಯಾಂಕಿಂಗ್ ಸೇವೆ ನೀಡಲು ಮುಂದಾಗಿರುವ ಎಂ.ಸಿ.ಸಿ ಬ್ಯಾಂಕಿಗೆ ಶುಭ ಹಾರೈಸಿದರು. ಆರ್.ಬಿ.ಐ ಮಾನದಂಡದೊಂದಿಗೆ ಸಹಕಾರಿ ರಂಗವನ್ನು ಮುನ್ನಡೆಸುವುದು ಹೂವಿನ ಹಾಸಿಗೆಯಲ್ಲ. ಆದರೂ, ಸಾರ್ವಜನಿಕರ ಸಹಕಾರ […]

ಶತಮಾನ ಕಂಡ MCC ಬ್ಯಾಂಕ್ 1000 ಕೋಟಿ ವ್ಯವಹಾರ ಸಂಭ್ರಮ: ಫೆ.1 ರಿಂದ ಮೇ 10 ರವರೆಗೆ ವಿಶೇಷ ಕೊಡುಗೆಗಳು!! ಸಾಲದ ಮೇಲೆ 0% ಸಂಸ್ಕರಣಾ ಶುಲ್ಕ!

ಮಂಗಳೂರು: ಕಳೆದ 112 ವರ್ಷಗಳಿಂದ ಗ್ರಾಹಕರ ವಿಶ್ವಾಸಾರ್ಹತೆಯನ್ನು ಗಳಿಸಿ ಉತೃಷ್ಟ ಗುಣಮಟ್ಟದ ಸೇವೆ ನೀಡಿ 1000 ಕೋಟಿ ವ್ಯವಹಾರದ ಮೈಲಿಗಲ್ಲನ್ನು ಸ್ಥಾಪಿಸಿರುವ ದ.ಕ ಜಿಲ್ಲೆಯ ಸುಪ್ರಸಿದ್ದ MCC ಬ್ಯಾಂಕ್ ಫೆ.1 ರಿಂದ ಮೇ 10 ರವರೆಗೆ ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ವಾಹನ ಸಾಲ, ಚಿನ್ನಾಭರಣ ಸಾಲದ ಮೇಲೆ 0% ಸಂಸ್ಕರಣಾ ಶುಲ್ಕ. ಭದ್ರತಾ ಲಾಕರ್ ಮೇಲೆ ಶೂನ್ಯ ಬಾಡಿಗೆ(ಒಂದು ವರ್ಷ ಕಾಲ) ಹಾಗೂ ವಿದ್ಯಾ ಭವಿಷ್ಯ ದೇಶ-ವಿದೇಶದಲ್ಲಿ ಉನ್ನತ ಶಿಕ್ಷಣ ಸಾಲದ ಮೇಲೆ 0% ಸಂಸ್ಕರಣಾ […]

ಎಂ.ಸಿ.ಸಿ ಬ್ಯಾಂಕ್ ಸುರತ್ಕಲ್ ಶಾಖೆಯ ಹೊಸ ಆವರಣದ ಉದ್ಘಾಟನೆ ಮತ್ತು ರಜತ ಮಹೋತ್ಸವ ಆಚರಣೆ

ಸುರತ್ಕಲ್: ಗ್ರಾಹಕರ ಅನುಕೂಲಕ್ಕಾಗಿ ಎಂ.ಸಿ.ಸಿ. ಬ್ಯಾಂಕ್ ಲಿಮಿಟೆಡ್‌ನ ಸುರತ್ಕಲ್ ಶಾಖೆಯನ್ನು ಜ. 26 ರಂದು ಲ್ಯಾಂಡ್ ಲಿಂಕ್ಸ್ ಪರ್ಲ್ ನ ನೆಲ ಮಹಡಿಯಲ್ಲಿರುವ ಸಂಪೂರ್ಣ ಹವಾನಿಯಂತ್ರಿತ ಆವರಣಕ್ಕೆ ಸ್ಥಳಾಂತರಿಸಲಾಯಿತು. ಈ ಸಂದರ್ಭದಲ್ಲಿ ಸುರತ್ಕಲ್ ಶಾಖೆಯ ಬೆಳ್ಳಿಹಬ್ಬವನ್ನು ಆಚರಿಸಲಾಯಿತು. ಸುರತ್ಕಲ್ ಶಾಖೆಯ ನೂತನ ಆವರಣವನ್ನು ಬ್ಯಾಂಕ್ ನ ಅಧ್ಯಕ್ಷ ‘ಸಹಕಾರ ರತ್ನ’ ಅನಿಲ್ ಲೋಬೊ ಉದ್ಘಾಟಿಸಿ ಮಾತನಾಡಿ, ಶಾಖೆಯನ್ನು ನೆಲಮಹಡಿಯಲ್ಲಿ ಹೆಚ್ಚು ಅನುಕೂಲಕರ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದು ಕಳೆದ ವರ್ಷ ನಡೆದ ಗ್ರಾಹಕರ ಸಭೆಯಲ್ಲಿ ಆಡಳಿತ ಮಂಡಳಿ ನೀಡಿದ […]