ನನ್ನನ್ನು ಸಿಎಂ ಸ್ಥಾನದಿಂದ ಮಧ್ಯದಲ್ಲೇ ಕೆಳಗಿಳಿಸಬಹುದು.?
ಪಟ್ನಾ: ಬಿಹಾರದ ಜನನಾಯಕ ಕರ್ಪೂರಿ ಠಾಕೂರ್ ರೀತಿಯಲ್ಲಿ ನನ್ನನ್ನು ಸಹ ಮಧ್ಯದಲ್ಲೇ ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಗೊಳಿಸಬಹುದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸುಳಿವು ನೀಡಿದ್ದಾರೆ. ಬಿಹಾರ ಮಾಜಿ ಮುಖ್ಯಮಂತ್ರಿ ದಿ. ಕರ್ಪೂರಿ ಠಾಕೂರ್ ಅವರ ಜಯಂತ್ಯೋತ್ಸವ ಪ್ರಯುಕ್ತ ಜೆಡಿಯು ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಿತೀಶ್ ಮಾತನಾಡಿದರು. ಕರ್ಪೂರಿ ಠಾಕೂರ್ ಸಹ ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸಿದ್ದರು. ಅದರ ಹೊರತಾಗಿಯೂ ಅವರನ್ನು ಎರಡೇ ವರ್ಷಗಳಲ್ಲಿ ಸಿಎಂ ಪದವಿಯಿಂದ ಕೆಳಗಿಳಿಸಲಾಗಿತ್ತು. ಅದೇ ರೀತಿ ನಾನು ಸಹ […]