ಕರಾವಳಿಯ ಜೀವನಾಡಿ ಮತ್ಸ್ಯಗಂಧಾ ಎಕ್ಸ್ ಪ್ರೆಸ್ ಗೆ ರಜತ ಸಂಭ್ರಮ: ಉಡುಪಿ ನಿಲ್ದಾಣದಲ್ಲಿ ಸಂಭ್ರಮಾಚರಣೆ

ಉಡುಪಿ: ದಿ. ಜಾರ್ಜ್ ಫೆರ್ನಾಂಡೀಸ್ ಅವರ ಕನಸಿನ ಕೂಸು, ಅವಿಭಜಿತ ದ.ಕ ಜಿಲ್ಲೆಯನ್ನು ಒಂದುಗೂಡಿಸುವ ಕೊಂಕಣ ರೈಲ್ವೆಯ “ಮತ್ಸ್ಯ ಗಂಧಾ” ಎಕ್ಸ್‌ಪ್ರೆಸ್‌ ರೈಲು ಈ ಮಾರ್ಗದಲ್ಲಿ ತನ್ನ ಓಡಾಟವನ್ನು 1998ರ ಮೇ 1ರಂದು ಪ್ರಾರಂಭಿಸಿತು. ಉಡುಪಿಯೂ ಕೂಡಾ ಪ್ರತ್ಯೇಕ ಜಿಲ್ಲೆಯಾಗಿ ರೂಪುಗೊಂಡು ರಜತ ಸಂಭ್ರಮವನ್ನು ಆಚರಿಸುತ್ತಿರುವ ಈ ಹೊತ್ತಿನಲ್ಲಿ ಮತ್ಸ್ಯಗಂಧಾ ಎಕ್ಸ್‌ಪ್ರೆಸ್‌ ಕೂಡಾ 25 ವರ್ಷ ಪೂರ್ಣಗೊಳಿಸಿ ರಜತ ಮಹೋತ್ಸವವನ್ನು ಆಚರಿಸುತ್ತಲಿದೆ. ಈ ದಿನವನ್ನು ಅವಿಸ್ಮರಣೀಯವಾಗಿಸಲು ಉಡುಪಿ ರೈಲು ಯಾತ್ರಿ ಸಂಘವು ಇದನ್ನು ವಿಶೇಷ ರೀತಿಯಲ್ಲಿ ಆಚರಿಸಲು […]