ಮಟಪಾಡಿ ಶ್ರೀನಿಕೇತನ ಹಿರಿಯ ಪ್ರಾಥಮಿಕ ಹಾಗೂ‌ ಪ್ರೌಢಶಾಲೆಗೆ ಹಳೆ ವಿದ್ಯಾರ್ಥಿಗಳಿಂದ ಧನಸಹಾಯ

ಬ್ರಹ್ಮಾವರ: ಮಟಪಾಡಿ ಶ್ರೀನಿಕೇತನ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯ 1996-97ನೇ ಸಾಲಿನ ಹಳೆವಿದ್ಯಾರ್ಥಿಗಳ ವತಿಯಿಂದ ಶಾಲಾ ಅಭಿವೃದ್ಧಿ ಸಮಿತಿಗೆ 25 ಸಾವಿರ ರೂ. ಹಾಗೂ 45 ಸಾವಿರ ರೂ. ದನ ಸಹಾಯ ಮಾಡಲಾಯಿತು. ಶಾಲಾ ಮುಖ್ಯೋಪಾಧ್ಯಾಯರಿಗೆ ದೇಣಿಗೆ ಹಸ್ತಾಂತರಿಸಲಾಯಿತು. ಶಾಲಾ ಆಡಳಿತ ಮಂಡಳಿ ಹಳೆ ವಿದ್ಯಾರ್ಥಿ‌ ಸಂಘಕ್ಕೆ ಧನ್ಯವಾದ ತಿಳಿಸಿದೆ.