ಸಿನಿಮಾ ಚಿತ್ರೀಕರಣದ ವೇಳೆ ಭಾರೀ ದುರಂತ: ಹೀರೋ ಗನ್​ನಿಂದ ಫೈರ್ ಆದ ಬುಲೆಟ್ ತಗುಲಿ ಮಹಿಳೆ ಸಾವು

ಸಿನಿಮಾವೊಂದರ ಚಿತ್ರೀಕರಣದ ವೇಳೆ ಗುಂಡು ತಗುಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಿರ್ದೇಶಕ ಗಂಭೀರವಾಗಿ ಗಾಯಗೊಂಡ ಘಟನೆ ಅಮೆರಿಕಾದಲ್ಲಿ ನಡೆದಿದೆ. ರಸ್ಟ್​ ಎಂಬ ಸಿನಿಮಾದ ಚಿತ್ರೀಕರಣದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಮೆರಿಕಾದ ನಟ ಅಲೆಕ್​ ಬಾಲ್ಡಿವಿನ್​ ಕೈಯಲ್ಲಿದ್ದ ಗನ್​ನಿಂದ ಅಕಸ್ಮಾತ್​ ಆಗಿ ಬುಲೆಟ್​ ಫೈಯರ್​ ಆಗಿದೆ. ಇದರಿಂದಾಗಿ ಸೆಟ್​ನಲ್ಲಿದ್ದ ಮಹಿಳೆ ಸಾವನ್ನಪ್ಪಿದ್ದು, ನಿರ್ದೇಶಕನಿಗೂ ಗುಂಡೇಟು ತಗುಲಿ ಆತನಿಗೆ ಗಂಭಿರವಾದ ಗಾಯಗಳಾಗಿವೆ. ಇನ್ನು ಈ ಸಿನಿಮಾದ ಸೆಟ್​ಗೆ ಪೊಲೀಸರು ನಿರ್ಬಂಧ ಹೇರಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.