ರಷ್ಯಾದಲ್ಲಿ ಬ್ಲಾಕ್‌ಮೇಲ್ ಅಥವಾ ಆಂತರಿಕ ಪ್ರಕ್ಷುಬ್ಧತೆಯ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಲಾದುವುದು ಎಂದ ಪುತಿನ್
ಮಾಸ್ಕೋ: ವ್ಯಾಗ್ನರ್ ಖಾಸಗಿ ಮಿಲಿಟರಿ ದಂಗೆಯನ್ನು ವಿಫಲಗೊಳಿಸಿದ ನಂತರ, ಸೋಮವಾರದಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್, ರಷ್ಯಾದಲ್ಲಿ ಬ್ಲಾಕ್‌ಮೇಲ್ ಅಥವಾ ಆಂತರಿಕ ಪ್ರಕ್ಷುಬ್ಧತೆಯ ಯಾವುದೇ ಪ್ರಯತ್ನವು ವಿಫಲಗೊಳ್ಳುತ್ತದೆ ಎಂದು ಎಚ್ಚರಿಸಿದ್ದಾರೆ. ರಷ್ಯನ್ನರು ಪರಸ್ಪರರನ್ನು ಕೊಲ್ಲಬೇಕೆಂದು ಪಶ್ಚಿಮ ದೇಶಗಳು ಮತ್ತು ಕೈವ್ ಬಯಸುತ್ತಿದೆ ಎಂದು ಅವರು ಹೇಳಿದ್ದಾರೆ. ಶನಿವಾರದಂದು ಪ್ರಾರಂಭವಾದ ಶಸ್ತ್ರಸಜ್ಜಿತ ಖಾಸಗಿ ಸೈನಿಕರ ದಂಗೆಯು 24 ಗಂಟೆಗಳಿಗೂ ಮೊದಲೆ ಕೊನೆಗೊಂಡಿತು. ಸೋಮವಾರ ರಾಷ್ಟ್ರವನ್ನುದ್ದೇಶಿಸಿ ದೂರದರ್ಶನದ ಭಾಷಣದಲ್ಲಿ ಮಾತನಾಡಿದ ಪುತಿನ್, ಘಟನೆಗಳು ಪ್ರಾರಂಭವಾದಾಗಿನಿಂದಲೂ ದೊಡ್ಡ ಪ್ರಮಾಣದ ರಕ್ತಪಾತವನ್ನು ತಪ್ಪಿಸಲು […]
ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆಯೆ ವ್ಲಾದಿಮಿರ್ ಪುತಿನ್? ಆಡಿಯೊ ಟೇಪ್‌ನಲ್ಲಿ ಬಹಿರಂಗವಾಯಿತೆ ಪುತಿನ್ ಅನಾರೋಗ್ಯದ ವಿಷಯ?!
ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ ಎಂದು ಬ್ರಿಟನ್ ನ ಮಾಜಿ ಗೂಢಚಾರಿ ಕ್ರಿಸ್ಟೋಫರ್ ಸ್ಟೀಲ್ ಹೇಳಿದ್ದಾರೆ. ಡೊನಾಲ್ಡ್ ಟ್ರಂಪ್ ಕುರಿತು ದಸ್ತಾವೇಜನ್ನು ಬರೆದಿದ್ದ ಮತ್ತು 2016 ರ ಅಮೇರಿಕಾ ಚುನಾವಣಾ ಪ್ರಚಾರದಲ್ಲಿ ರಷ್ಯಾದ ಹಸ್ತಕ್ಷೇಪವನ್ನು ಆರೋಪಿಸಿದ್ದ ಸ್ಟೀಲ್, ಸ್ಕೈ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, “ನಿಸ್ಸಂಶಯವಾಗಿ, ರಷ್ಯಾ ಮತ್ತು ಬೇರೆಡೆಯ ಮೂಲಗಳಿಂದ ನಾವು ಕೇಳುತ್ತಿರುವ ಪ್ರಕಾರ, ಪುಟಿನ್ ವಾಸ್ತವವಾಗಿ ತೀವ್ರವಾಗಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ” ಎಂದಿದ್ದಾರೆ. ಇವೆಲ್ಲದರ ನಡುವೆ, ರಷ್ಯಾದ ಮಿತ್ರ ಜನತಂತ್ರದ ಸದಸ್ಯರೊಬ್ಬರು ಪುತಿನ್ […]