ಉಡುಪಿಯಲ್ಲಿ ‘ಮಾರ್ವಾಡಿ ಹಠಾವೋ‌’ ಅಭಿಯಾನ ಆರಂಭಿಸಿರುವುದು ಖಂಡನೀಯ: ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ

ಉಡುಪಿ: ಉಡುಪಿ ಜಿಲ್ಲೆ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ವೈವಿಧ್ಯತೆಯನ್ನು ಹೊಂದಿದೆ. ಏಕತೆಯ ಸಂಕೇತವಾಗಿರುವ ಉಡುಪಿಯಲ್ಲಿ ಮಾರ್ವಾಡಿ ಹಠಾವೋ‌ ಅಂತಹ ಯಾವುದೇ ಹಠಾವೋ ಅಭಿಯಾನಗಳು ನಡೆಯುತ್ತಿರುವುದು ಸರಿಯಲ್ಲ. ಇದನ್ನು ಜಿಲ್ಲಾ ಬಿಜೆಪಿ ಖಂಡಿಸುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ. ಉಡುಪಿ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಯುತ್ತಿರುವ ‘ಮಾರ್ವಾಡಿ ಹಠಾವೋ’ ಎಂಬ ಅಭಿಯಾನವನ್ನು ಖಂಡಿಸಿದರು ‘ಏಕ್ ಭಾರತ್ ಶೇಷ್ಠ ಭಾರತ್’ ಎಂಬ […]