ಮಂಗಳೂರು: ಅಪಹರಣಕ್ಕೀಡಾದ ವಿದ್ಯಾರ್ಥಿ ಪತ್ತೆ

ಮಂಗಳೂರು: ಅಪಹರಣಕ್ಕೀಡಾಗಿದ್ದ ಮಂಗಳೂರಿನ ಖಾಸಗಿ ಕಾಲೇಜು ವಿದ್ಯಾರ್ಥಿ ಹಾರಿಸ್ ಗುರುವಾರ ಪತ್ತೆಯಾಗಿದ್ದಾನೆ. ಈತ ಜು. 22ರಂದು ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ವರ್ಕಾಡಿಯ ಕಳಿಯೂರಿನಿಂದ ಅಪಹರಣಕ್ಕೀಡಾಗಿದ್ದ. ಅಪಹರಣಕಾರರು ಹಾರಿಸ್ ನನ್ನು ಮಂಗಳೂರಿನ ಬಸ್ ನಿಲ್ದಾಣದಲ್ಲಿ ತೊರೆದು ಹೋಗಿದ್ದರು. ವಿಷ್ಯ ತಿಳಿದ ಮಂಜೇಶ್ವರ ಪೊಲೀಸರು ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ಕುಂಬಳೆ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ. ಆನಂತರ ಪ್ರಕರಣದ ಕುರಿತಂತೆ ಹೆಚ್ಚಿನ ಮಾಹಿತಿ ಕಲೆ ಹಾಕುವ ಉದ್ದೇಶದಿಂದ ಆತನನ್ನು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಕಳುಹಿಸಲಾಗಿದೆ. […]

ಮಂಜೇಶ್ವರ: ಹಾಡಹಗಲೇ ವಿದ್ಯಾರ್ಥಿಯ ಅಪಹರಣ

ಮಂಗಳೂರು: ಹಾಡಹಗಲೇ ಕಾಲೇಜು ವಿದ್ಯಾರ್ಥಿಯನ್ನು ಅಪಹರಣ ನಡೆಸಿದಂತಹ ಘಟನೆ ಕಾಸರಗೋಡು ಮಂಜೇಶ್ವರದ ವರ್ಕಾಡಿಯ ಕಳಿಯೂರಲ್ಲಿ ಸೋಮವಾರ ನಡೆದಿದೆ. ಪಿಯುಸಿ ವಿದ್ಯಾರ್ಥಿ ಹಾರಿಸ್ (17) ಅಪಹರಣಕ್ಕೊಳಗಾದತ. ಕಾರಿನಲ್ಲಿ ಬಂದ ತಂಡ ಅಪಹರಣ ಮಾಡಿದೆ ಎಂದು ತಿಳಿದು ಬಂದಿದೆ. ಈತ ಮಂಗಳೂರಿನ ತೊಕ್ಕೊಟ್ಟಿನ ಖಾಸಗಿ ಕಾಲೇಜಿನ ಪಿಯು ವಿದ್ಯಾರ್ಥಿಯಾಗಿದ್ದು, ಹಾರಿಸ್ ತನ್ನ ಸಹೋದರಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ. ಕೋಳಿಯೂರು ಪದವಿನ ಆಡಿಟೋರಿಯಂ ಬಳಿ ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿ ಅಪಹರಣ ನಡೆಸಲಾಗಿದೆ. ಈ ಬಗ್ಗೆ ಮಂಜೇಶ್ವರ ಪೊಲೀಸರಿಂದ ತನಿಖೆ ನಡೆಯುತ್ತಿದ್ದು, ಆರೋಪಿಗಳಿಗಾಗಿ […]