ಮಣಿಪಾಲ- ಪೆರಂಪಳ್ಳಿ- ಶೀಂಬ್ರ ರಸ್ತೆಗೆ ಜಾಗದ ಸಮಸ್ಯೆ: ಶಾಸಕ ರಘುಪತಿ ಭಟ್ ರಿಂದ ಸ್ಥಳೀಯರ ಮನವೊಲಿಕೆ
ಉಡುಪಿ: ಇಲ್ಲಿನ ಮಣಿಪಾಲ – ಪೆರಂಪಳ್ಳಿ – ಶೀಂಬ್ರ ರಸ್ತೆ ಅಗಲೀಕರಣಗೊಳಿಸಿ ಅಭಿವೃದ್ಧಿ ಪಡಿಸಲು ಶಾಸಕ ಕೆ. ರಘುಪತಿ ಭಟ್ ರವರ ಶಿಫಾರಸ್ಸಿನ ಮೇರೆಗೆ ರೂ. 7.00 ಕೋಟಿ ಅನುದಾನ ಮಂಜೂರಾಗಿ ಭಾಗಶಃ ಕಾಮಗಾರಿ ಪೂರ್ಣಗೊಂಡಿರುತ್ತದೆ. ಈ ರಸ್ತೆ ಹಾದುಹೋಗುವ ಪೆರಂಪಳ್ಳಿಯ ಶೀಂಬ್ರ ಬ್ರಿಡ್ಜ್ ಬಳಿ ರಸ್ತೆ ಅಗಲೀಕರಣಕ್ಕೆ ಖಾಸಗಿ ಜಾಗದ ಸಮಸ್ಯೆ ಉಂಟಾಗಿ ರಸ್ತೆ ಕಾಮಗಾರಿ ಸ್ಥಗಿತಗೊಂಡಿತ್ತು. ಇದರಿಂದ ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಸ್ಥಳೀಯರ ಮನವಿಯಂತೆ ಶಾಸಕರು ಶನಿವಾರದಂದು ಜಿಲ್ಲಾಧಿಕಾರಿಗಳಾದ ಕೂರ್ಮಾ ರಾವ್ ಎಂ. ಹಾಗೂ […]