ಮಣಿಪಾಲ: ಫೆ. 7ರಿಂದ ನರಸಿಂಗೆ ದೇವಳದಲ್ಲಿ ಯಕ್ಷಗಾನ ನೃತ್ಯ ತರಗತಿ ಆರಂಭ

ಮಣಿಪಾಲ: ನರಸಿಂಗೆ ಶ್ರೀ ನರಸಿಂಹ ದೇವಳದಲ್ಲಿ ಬಡಗುತಿಟ್ಟಿನ ಯಕ್ಷಗಾನ ಕಲಾವಿದೆ ಶಶಿಕಲಾ ಪ್ರಭು ಚೇರ್ಕಾಡಿ ಅವರು ನಡೆಸಿಕೊಡಲಿರುವ ಯಕ್ಷಗಾನ ನೃತ್ಯ ತರಗತಿಗಳ ಉದ್ಘಾಟನಾ ಸಮಾರಂಭವು ಫೆಬ್ರವರಿ 7ರಂದು ಮಧ್ಯಾಹ್ನ 3ಗಂಟೆಗೆ ನಡೆಯಲಿದೆ. ತರಬೇತಿ ಕಾರ್ಯಕ್ರಮವನ್ನು ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ಉದ್ಘಾಟಿಸಲಿದ್ದಾರೆ. ನರಸಿಂಗೆ ಶ್ರೀ ನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ ಸಾಲ್ವಂಕಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸುನೀಲ್ ಬೊರ್ಕಾರ್ ಪುತ್ತೂರು ಭಾಗವಹಿಸಲಿದ್ದಾರೆ ಎಂದು ದೇಗುಲದ ಪ್ರಕಟಣೆ ತಿಳಿಸಿದೆ.