ಜನಸಾಮಾನ್ಯರ ಆರೋಗ್ಯ ರಕ್ಷಣೆಗೆ ನಿಷ್ಕಾಮ, ನಿಸ್ವಾರ್ಥ ಸೇವೆ ಸಲ್ಲಿಸುವ ವೈದ್ಯರ ಕೊಡುಗೆ ಪ್ರಶಂಸನೀಯ: ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ
ಉಡುಪಿ: ವೈದ್ಯಕೀಯ ವೃತ್ತಿ ತುಂಬಾ ಅಮೂಲ್ಯವಾದದ್ದು ಜನಸಾಮಾನ್ಯರ ಆರೋಗ್ಯ ರಕ್ಷಣೆಗೆ ನಿಷ್ಕಾಮ, ನಿಸ್ವಾರ್ಥ ಸೇವೆ ಸಲ್ಲಿಸುವ ವೈದ್ಯರ ಕೊಡುಗೆ ಪ್ರಶಂಸನೀಯ ಎಂದು ಕರ್ನಾಟಕದ ಪ್ರಥಮ ಮಹಿಳಾ ಹೃದಯ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿಯವರು ಹೇಳಿದರು. ಅವರು ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅಗಮಿಸಿ ಪ್ರಸ್ತುತ ವೈದ್ಯರಿಗಿರುವ ಸವಾಲುಗಳು, ಅದನ್ನು ಯಾವ ರೀತಿಯಲ್ಲಿ ಎದುರಿಸಿ ಮುನ್ನಡೆಯಬೇಕೆಂದು ಸಲಹೆ ನೀಡಿದರು. ಹಿರಿಯ ವೈದ್ಯರುಗಳಾದ ಮಣಿಪಾಲದ ಕುಟುಂಬ ವೈದ್ಯ ಡಾ। […]