ಮಣಿಪಾಲ: ‘ನಮ್ಮ ಮನೆ ನಮ್ಮ ದೇಶ’ ತ್ಯಾಜ್ಯ ವಿಲೇವಾರಿ ಅಭಿಯಾನಕ್ಕೆ ಚಾಲನೆ

ಮಣಿಪಾಲ: ಈಶ್ವರನಗರ ವಾರ್ಡ್ ನಲ್ಲಿ ನಮ್ಮ ಮನೆ ನಮ್ಮ ದೇಶ ಎನ್ನುವ ವಿನೂತನ ಪರಿಕಲ್ಪನೆಯಡಿಯಲ್ಲಿ ಒಣ ಮತ್ತು ಹಸಿ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಗೆ ಹೊಸ ವೇಗ ಮತ್ತು ಜೀವ ತುಂಬುವ ನಿಟ್ಟಿನಲ್ಲಿ ಹಮ್ಮಿಕೊಂಡ ಅಭಿಯಾನಕ್ಕೆ ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ ಚಾಲನೆ ನೀಡಿದರು. ಅಭಿಯಾನದ ಸಂಚಾಲಕ ಹಾಗು ಪೆರಂಪಳ್ಳಿ ಇಂದಿರಾ ಶಿವರಾವ್ ಪೊಲಿಟೆಕ್ನಿಕ್ ನ ಪ್ರಾಂಶುಪಾಲ ಪ್ರಕಾಶ್ ಶೆಣೈ ಅವರು ಮಾತನಾಡಿ, ಇಡೀ ದೇಶವನ್ನು ನಮ್ಮ ಮನೆ ಎಂಬ ಭಾವನೆಯಲ್ಲಿ ಪೂಜಿಸಿ ಗೌರವಿಸಬೇಕು. ಸ್ವಚ್ಛತೆಯನ್ನು ಕೂಡಾ ಇದೇ […]