ಮಣಿಪಾಲ: ಮಾನಸಿಕ ಅಸ್ವಸ್ಥನ ರಕ್ಷಣೆ

ಉಡುಪಿ: ಮಣಿಪಾಲ ಪರಿಸರದಲ್ಲಿ ಉಗ್ರ ರೀತಿಯಲ್ಲಿ ವರ್ತಿಸುತ್ತಿದ್ದ ಅಪರಿಚಿತ ಮಾನಸಿಕ ಅಸ್ವಸ್ಥನ ರಕ್ಷಣಾ ಕಾರ್ಯಚರಣೆಯು ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಸೋಮವಾರ ನಡೆಯಿತು. ಮಣಿಪಾಲ ಪೋಲಿಸ್ ಠಾಣೆ, ಉಡುಪಿ ಜಿಲ್ಲಾ ನಾಗರಿಕ ಸಮಿತಿ, ಹಾಗೂ ಸ್ಥಳಿಯರು ಕಾರ್ಯಚರಣೆಗೆ ಸಹಕಾರ ನೀಡಿದರು. ಕಳೆದ ಹಲವಾರು ದಿನಗಳಿಂದ ನಗರದ ರಸ್ತೆಗಳಲ್ಲಿ ಅಪರಿಚಿತ ಮಾನಸಿಕ ಅಸ್ವಸ್ಥನೊರ್ವ ಸಂಚರಿಸುತ್ತಿದ್ದನು. ಇತನ ಉಪಟಳದಿಂದ ಸಾರ್ವಜನಿಕರು ಭೀತಿಗೊಳಗಾಗಿದ್ದರು. ಅಶ್ಲಿಲ ವರ್ತನೆ, ವಿನಾಕಾರಣ ವಾಹನಗಳ ಮೇಲೆ ಕಲ್ಲುಗಳನ್ನು ಎಸೆಯುವುದು, ಮಹಿಳೆಯರನ್ನು ಹಿಂಬಾಲಿಸುವ ವಿಕೃತ ಕೃತ್ಯಗಳು […]