ಫೆ. 11 ರಂದು 6 ನೆಯ ಮಣಿಪಾಲ್‌ ಮ್ಯಾರಥಾನ್‌ ಆಯೋಜನೆ

ಮಣಿಪಾಲ: ಜೀವನ್ಮರಣ (ಪ್ರಾಣಾಂತಿಕ)ಸ್ಥಿತಿಯಲ್ಲಿರುವ ರೋಗಿಗಳ ಪ್ರಶಾಮಕ ಆರೈಕೆ ಕೇಂದ್ರದ ಉದ್ದೇಶಿತ ಉದಾತ್ತ ಆಶಯದೊಂದಿಗೆ 6 ನೆಯ ಮಣಿಪಾಲ್‌ ಮ್ಯಾರಥಾನ್‌ ಅನ್ನು 2024 ರ ಫೆಬ್ರವರಿ 11 ರಂದು ಆಯೋಜಿಸಲಾಗುವುದು ಎಂದು ಮಾಹೆ ಸಹಕುಲಾಧಿಪತಿ ಡಾ. ಎಚ್‌. ಎಸ್‌. ಬಲ್ಲಾಳ್‌ ಮಾಹಿತಿ ನೀಡಿದರು. ಅವರು ಶುಕ್ರವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಲದ ಮ್ಯಾರಥಾನ್‌ ‘ಜೀವನ್ಮರಣ (ಪ್ರಾಣಾಂತಿಕ)ಕಾಯಿಲೆಯನ್ನು ಅನುಭವಿಸುತ್ತಿರುವ ರೋಗಿಗಳಿಗೆ ಪ್ರಶಾಮಕ ಆರೈಕೆ ಕೇಂದ್ರ [ಹಾಸ್ಪಿಸ್‌ ಕೇರ್‌] ಎಂಬ ಉದಾತ್ತ ಆಶಯವನ್ನು ಹೊಂದಿದೆ. ‘ನಾವು ನಿಮ್ಮ […]