ಮಣಿಪಾಲ-ಮಂಗಳೂರು: ಜ. 30ರಿಂದ ವೋಲ್ವೋ ಸಾರಿಗೆ ಆರಂಭ

ಉಡುಪಿ: ಮಣಿಪಾಲದಿಂದ ಉಡುಪಿ, ಮಂಗಳೂರು, ಹಾಸನ ಮಾರ್ಗವಾಗಿ ಬೆಂಗಳೂರಿಗೆ ಹಗಲು ವೇಳೆಯಲ್ಲಿ ಕ್ಲಬ್ ಕ್ಲಾಸ್ ವೋಲ್ವೋ ಸಾರಿಗೆ ಸೌಲಭ್ಯವನ್ನು ಜನವರಿ 30ರಿಂದ ಆರಂಭಿಸಲಾಗುವುದು ಎಂದು ಮಂಗಳೂರು ಕರಾರಸಾಸಂ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ. ಮಣಿಪಾಲದಿಂದ ಬೆಳಿಗ್ಗೆ 9.15 ಕ್ಕೆ ಹೊರಟು ಉಡುಪಿ, ಮಂಗಳೂರು, ಹಾಸನ ಮಾರ್ಗವಾಗಿ ಸಂಜೆ 6 ಗಂಟೆಗೆ ಬೆಂಗಳೂರು ತಲುಪಲಿದೆ. ಮರು ಪ್ರಯಾಣದಲ್ಲಿ ಬೆಳಿಗ್ಗೆ 8 ಗಂಟೆಗೆ ಬೆಂಗಳೂರಿನಿಂದ ಹೊರಟು ಹಾಸನ, ಮಂಗಳೂರು, ಉಡುಪಿ ಮಾರ್ಗವಾಗಿ ಸಂಜೆ 4.30 ಕ್ಕೆ ಮಣಿಪಾಲ ತಲುಪಲಿದೆ. ನಿಗಮದ ವಾಹನಗಳಲ್ಲಿ […]