ಮಣಿಪಾಲ: ಹಂದಿಗೆ ತೋಡಿದ್ದ ಖೆಡ್ಡಾಕ್ಕೆ ಬಿದ್ದು ಚಿರತೆ ಮೃತ್ಯು
ಉಡುಪಿ: ಹಂದಿಗೆ ಇಟ್ಟಿದ್ದ ಉರುಳಿಗೆ ಚಿರತೆಯೊಂದು ಮೃತಪಟ್ಟ ಘಟನೆ ಮಣಿಪಾಲದ ಹಿರೇಬೆಟ್ಟು ಗ್ರಾಮದ ಕಂಚಿನಬೈಲು ಎಂಬಲ್ಲಿ ನಡೆದಿದೆ. ಇಲ್ಲಿನ ಸರ್ಕಾರಿ ಭೂಮಿಯಲ್ಲಿ ಹಂದಿಯ ಬೇಟೆಗಾಗಿ ತಂತಿಯ ಉರುಳನ್ನು ಕಟ್ಟಿದ್ದರು. ಆದರೆ ಅದರಲ್ಲಿ ಚಿರತೆ ಸಿಕ್ಕಿಹಾಕಿಕೊಂಡು ಒದ್ದಾಡಿ ಮೃತಪಟ್ಟಿದೆ. ಉರುಳು ಸೊಂಟಕ್ಕೆ ಬಿಗಿದ ಪರಿಣಾಮ ತಗ್ಗಿನಲ್ಲಿ ನೇತಾಡುತ್ತಾ ನೆಲ ಮುಟ್ಟುವುದಕ್ಕೆ ಶತಪ್ರಯತ್ನ ಮಾಡಿ, ಕೊನೆಗೆ ಪ್ರಾಣ ಬಿಟ್ಟಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿದ್ದು, ಚಿರತೆಯನ್ನು ಸ್ಥಳವನ್ನು ಮಹಜರು ಮಾಡಿದ್ದಾರೆ. ಇಲಾಖೆಯ ನಿಯಮಗಳಂತೆ ಚಿರತೆಯನ್ನು ಬೇರೆಡೆಗೆ ತೆಗೆದುಕೊಂಡು ಧಪನ ಮಾಡಿದ್ದಾರೆ. […]