ಮಣಿಪಾಲ ಜ್ಞಾನಸುಧಾ : ಸಿ.ಎ. ಫೌಂಡೇಶನ್, ಸಿ.ಎಸ್.ಇ.ಇ.ಟಿ. ಓರಿಯಂಟೇಶನ್ ಇನ್ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರಯತ್ನಶೀಲತೆ ಮೊದಲ ಗೆಲುವು: ಸಿ.ಎ. ಗೋಪಾಲ ಕೃಷ್ಣ ಭಟ್

ಉಡುಪಿ:ಎಂತಹ ಕಷ್ಟದ ದಾರಿಯಿದ್ದರೂ ಆತ್ಮವಿಶ್ವಾಸದಪ್ರಯತ್ನಶೀಲತೆ ಮೊದಲ ಗೆಲುವಿದ್ದಂತೆ, ಅರ್ಧ ಸಾಧಿಸಿದಂತೆ,ಉಳಿದರ್ಧ ಆ ಪ್ರಯತ್ನಶೀಲತೆಯೇ ನಮ್ಮನ್ನು ಸಾಧಿಸುವಂತೆಪ್ರೇರೇಪಿಸುತ್ತದೆ ಎಂದು ತ್ರಿಷಾ ಸಮೂಹ ಶಿಕ್ಷಣ ಸಂಸ್ಥಗಳಸ್ಥಾಪಕರಾದ ಸಿ.ಎ. ಗೋಪಾಲಕೃಷ್ಣ ಭಟ್ ಅಭಿಪ್ರಾಯ ಪಟ್ಟಿದ್ದಾರೆ. ಅವರು ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜುವಿದ್ಯಾನಗರ ಇಲ್ಲಿಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆಹಮ್ಮಿಕೊಂಡಿದ್ದ ಸಿ.ಎ. ಫೌಂಡೇಶನ್, ಸಿ.ಎಸ್.ಇ.ಇ.ಟಿ. ಓರಿಯಂಟೇಶನ್ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಪ್ರಸಕ್ತ ಪ್ರಪಂಚವನ್ನು ಕಾಮರ್ಸ್ ಆಳುತ್ತಿದೆ.ಇದನ್ನು ಅರ್ಥಮಾಡಿಕೊಂಡು ಮುಂದಿನ ಸ್ಪರ್ಧಾತ್ಮಕ ಜಗತ್ತಿಗೆ ಕಾಮರ್ಸ್ ವಿದ್ಯಾರ್ಥಿಗಳು ಕೌಶಲ್ಯಭರಿತರಾಗಿ ಅಣಿಯಾಗುವ ಅಗತ್ಯವಿದೆ ಎಂದರು. […]