ಮಣಿಪಾಲ: ಹೆಬ್ರಿಬೀಡು ಡಾ.ಅರವಿಂದ ಬಲ್ಲಾಳ್ ಸ್ಮಾರಕ ದತ್ತಿನಿಧಿ ಉದ್ಘಾಟನೆ
ಮಣಿಪಾಲ: ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆ, ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜು ಹಾಗೂ ಯೆನಪೋಯ ಮೆಡಿಕಲ್ ಕಾಲೇಜಿನಲ್ಲಿ ವೈದ್ಯರು ಹಾಗೂ ಜನಪ್ರಿಯ ಪ್ರಾಧ್ಯಾಪಕರಾಗಿ ಸುಮಾರು ನಾಲ್ಕೂವರೆ ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಹೆಬ್ರಿಬೀಡು ಡಾ.ಅರವಿಂದ ಬಲ್ಲಾಳ್‌ರ ಸ್ಮರಣಾರ್ಥ ಅವರ ಕುಟುಂಬಿಕರು ಹಾಗೂ ಶಿಷ್ಯರು ಮಾಹೆಯಲ್ಲಿ ಸ್ಥಾಪಿಸಿರುವ ದತ್ತಿನಿಧಿಯನ್ನು ಶನಿವಾರ ಉದ್ಘಾಟಿಸಲಾಯಿತು. ಈ ದತ್ತಿನಿಧಿಯನ್ನು ಮಣಿಪಾಲ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ರಂಜನ್ ಆರ್.ಪೈ ಅವರು ಉದ್ಘಾಟಿಸಿದರು. ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್. ಎಸ್.ಬಲ್ಲಾಳ್ ಹಾಗೂ ಮಾಹೆಯ ಸಹಕುಲಪತಿ ಡಾ.ಎಂ.ವೆಂಕಟ್ರಾಯ ಪ್ರಭು […]