ಮಣಿಪಾಲ: ಹಾಸ್ಟೆಲ್‌ಗೆ ನುಗ್ಗಿ ವಿದ್ಯಾರ್ಥಿನಿಗೆ ಕಿರುಕುಳ: ಆರೋಪಿಯ ಬಂಧನ

ಉಡುಪಿ: ಅನಂತನಗರದ ಬಿಸಿಎಂ ಬಾಲಕಿಯರ ವಸತಿ ನಿಲಯಕ್ಕೆ ಅಕ್ರಮ ಪ್ರವೇಶಿಸಿ ಕಿಟಕಿ ಮೂಲಕ ಕೈ ಹಾಕಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಸ್ಥಳೀಯ ನಿವಾಸಿ ನವೀನ್ ನಾಯ್ಕ್ (25) ಎಂದು ಗುರುತಿಸಲಾಗಿದೆ. ಈತ ಸೆ.1ರಂದು ನಸುಕಿನ ವೇಳೆ ವಸತಿ ನಿಲಯದ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿ ಬಳಿಕ ಕಿಟಕಿ ಮೂಲಕ ಕೈ ಹಾಕಿ ವಿದ್ಯಾರ್ಥಿನಿಯೊಬ್ಬಳ ಕೈ ಎಳೆದು ಕಿರುಕುಳ ನೀಡಿ ಪರಾರಿಯಾಗಿದ್ದನು. ಈ ಬಗ್ಗೆ ವಸತಿ ನಿಲಯದ ವಾರ್ಡನ್ ನೀಡಿದ ದೂರಿನಂತೆ ಮಣಿಪಾಲ […]