ಸಿಂಗಾಪುರ ಮೂಲದ ಟೆಮಾಸೆಕ್ ಹೋಲ್ಡಿಂಗ್ಸ್ ಫಂಡ್ ನಿಂದ ಮಣಿಪಾಲ್ ಹಾಸ್ಪಿಟಲ್ಸ್ ಷೇರು ಖರೀದಿ: ಕಂಪನಿ ಮೌಲ್ಯ 29,000 ಕೋಟಿ ರೂ.ಗೆ ಏರಿಕೆ

ಬೆಂಗಳೂರು: ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ ಸಿಂಗಾಪುರದ ಸರ್ಕಾರಿ ಸ್ವಾಮ್ಯದ ಹೂಡಿಕೆ ಕಂಪನಿ ಟೆಮಾಸೆಕ್ ಹೋಲ್ಡಿಂಗ್ಸ್ ಫಂಡ್, ಹೆಚ್ಚುವರಿ 33 ಶೇಕಡಾ ಪಾಲನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಭಾರತದ ಪ್ರಮುಖ ಆಸ್ಪತ್ರೆ ಸರಪಳಿಯಾದ ಮಣಿಪಾಲ್ ಹಾಸ್ಪಿಟಲ್ಸ್‌ ನ ಬಹುಪಾಲು ಷೇರುಗಳನ್ನು ಖರೀದಿಸಿದೆ. ಮಣಿಪಾಲದ ಪ್ರವರ್ತಕರು ಮತ್ತು ಅಸ್ತಿತ್ವದಲ್ಲಿರುವ ಷೇರುದಾರರಿಂದ ಟೆಮಾಸೆಕ್ ಹೋಲ್ಡಿಂಗ್ಸ್ ಫಂಡ್ 33 ಶೇಕಡಾ ಪಾಲನ್ನು ಖರೀದಿಸಿತು. ಖಾಸಗಿ ಇಕ್ವಿಟಿ ಸಂಸ್ಥೆಯಾದ KKR & Co ಆಸ್ಪತ್ರೆ ಗುಂಪಿನ 48 ಪ್ರತಿಶತದವರೆಗೆ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿತ್ತು. ಜೊತೆಗೆ, KKR […]