ಮಣಿಪಾಲ: ಸೆ.29ಕ್ಕೆ ಕೆಎಂಸಿ ಆಸ್ಪತ್ರೆಯ ಹೃದ್ರೋಗ ತಜ್ಞರೊಂದಿಗೆ ಮಾತುಕತೆ- ಸಂವಾದ
ಮಣಿಪಾಲ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವತಿಯಿಂದ ವಿಶ್ವ ಹೃದಯ ದಿನ 2021ರ ಅಂಗವಾಗಿ ಇದೇ ಸೆಪ್ಟೆಂಬರ್ 29ರ ಬುಧವಾರದಂದು ಸಂಜೆ 5ರಿಂದ 6 ಗಂಟೆಯವರೆಗೆ ಕಸ್ತೂರ್ಬಾ ಆಸ್ಪತ್ರೆಯ ಫೇಸ್ ಬುಕ್ ಚಾನೆಲ್ ನಲ್ಲಿ ಹೃದ್ರೋಗ ತಜ್ಞರೊಂದಿಗೆ ನೇರ ಮಾತುಕತೆ ಮತ್ತು ಮುಕ್ತ ಚರ್ಚಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಲಾಕ್ಡೌನ್ ಮತ್ತು ಕೋವಿಡ್ -19 ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಜನರ ಮೇಲೆ ಪರಿಣಾಮ ಬೀರಿತು. ಇದಕ್ಕೆ ಕಾರಣ ಹೆಚ್ಚಾಗಿ ಮನೆಯಲ್ಲಿಯೇ ಕುಳಿತು ಕೆಲಸ ಮಾಡುವ ಆರಾಮದಾಯಕ ಜೀವನ ಶೈಲಿ. […]