ಶಿರಸಿಯ ಮತ್ತಿಘಟ್ಟ ಫಾಲ್ಸ್‌ನಲ್ಲಿ ಮುಳುಗಿ ಮಣಿಪಾಲ ಕಾಲೇಜಿನ ವಿದ್ಯಾರ್ಥಿ ಮೃತ್ಯು.

ಕಾರವಾರ: ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ಫಾಲ್ಸ್‌ನಲ್ಲಿ ಈಜಲು ಹೋಗಿ ಮುಳಗಿ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮತ್ತಿಘಟ್ಟ ಫಾಲ್ಸ್‌ನಲ್ಲಿ ನಡೆದಿದೆ. ಮೃತಪಟ್ಟ ವಿದ್ಯಾರ್ಥಿ ಶಿವೋಹಂ ಅನಂತ್ ತಿವಾರಿ (18), ಮಣಿಪಾಲ ಎಮ್.ಐ.ಟಿಯಲ್ಲಿ ಬಿ.ಟೆಕ್ ಎರಡನೇ ಸೆಮಿಸ್ಟರ್ ಓದುತ್ತಿದ್ದ ಎಂದು ತಿಳಿದುಬಂದಿದೆ. ಭಾನುವಾರ (ಫೆ.15) ಬೆಳಿಗ್ಗೆ 30ಕ್ಕೂ ಹೆಚ್ಚು ಜನ ಬಿ.ಟೆಕ್ ಹಾಗೂ ಜರ್ನಲಿಸಂ ವಿದ್ಯಾರ್ಥಿಗಳು ಮಣಿಪಾಲ್‌ನಿಂದ ಪ್ರವಾಸಕ್ಕೆ ಬಂದಿದ್ದರು. ಹೊನ್ನಾವರ ಹಾಗೂ ಶಿರಸಿಯ ಮತ್ತಿಘಟ್ಟ ಭಾಗಕ್ಕೆ ವಿದ್ಯಾರ್ಥಿಗಳ ತಂಡ ತೆರಳಿತ್ತು. ಈ ವೇಳೆ […]