ಮಣಿಪಾಲ: ಅಡ್ಡಾದಿಡ್ಡಿ ಕಾರು ಚಲಾಯಿಸಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಪರಾರಿಯಾದ ದುಷ್ಕರ್ಮಿಗಳು
ಮಣಿಪಾಲ: ಕಾರನ್ನು ಅಡ್ಡಾದಿಡ್ಡಿ ಚಲಿಸಿ ಇತರ ವಾಹನಗಳಿಗೆ ಡಿಕ್ಕಿ ಹೊಡೆದು ಹಾನಿಗೈದ ಘಟನೆ ಮಣಿಪಾಲದಲ್ಲಿ ನಡೆದಿದೆ. ಕಾರು ಪರ್ಕಳ ಕಡೆಯಿಂದ ಮಣಿಪಾಲಕ್ಕೆ ಬರುವಾಗ ಕೆಎಂಸಿ ಆಸ್ಪತ್ರೆ ನಿಲ್ದಾಣ ಸಮೀಪ ಬಸ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದಿತ್ತು. ಬಳಿಕ ಹಿಂದಕ್ಕೆ ರಿವರ್ಸ್ ತೆಗೆಯುವಾಗ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಇದರಿಂದ ಹಲವು ವಾಹನ ಜಖಂಗೊಂಡಿದೆ. ಪರ್ಕಳದಿಂದ ಬರುವಾಗಲೆ ಅಡ್ಡಾದಿಡ್ಡಿ ಸಂಚರಿಸಿದ್ದ ಕಾರು ಕೆಲವು ವಾಹನಗಳಿಗೆ ಢಿಕ್ಕಿ ಹೊಡೆಸಿ ಹಾನಿಗೊಳಿಸಿದೆ ಎನ್ನಲಾಗಿದೆ. ಮಣಿಪಾಲದಲ್ಲಿ ಯುಟರ್ನ್ ಮಾಡಿಕೊಂಡು ಪರ್ಕಳ ಕಡೆಗೆ ಪರಾರಿಯಾಗುತ್ತಿದ್ದವರನ್ನು ಪೊಲೀಸರು […]