ಮಣಿಪಾಲ: ನೇಣು ಬಿಗಿದುಕೊಂಡು ವಿವಾಹಿತ ಮಹಿಳೆ ಆತ್ಮಹತ್ಯೆ

ಮಣಿಪಾಲ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ 80 ಬಡಗುಬೆಟ್ಟು ಗ್ರಾಮದ ನೇತಾಜಿ ನಗರದಲ್ಲಿ ಇಂದು ನಡೆದಿದೆ. ನೇತಾಜಿ ನಗರದ ನಿವಾಸಿ ಜಯಲಕ್ಷ್ಮೀ (35) ನೇಣಿಗೆ ಶರಣಾದ ಮಹಿಳೆ. ಈಕೆ ಎರಡು ವರ್ಷದಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಇದೇ ಕಾರಣದಿಂದ ಈ ಹಿಂದೆ ಮೂರ್ನಾಲ್ಕು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆದರೆ ನೆರೆ ಮನೆಯವರ ಸಹಾಯದಿಂದ ಬದುಕುಳಿದಿದ್ದಳು. ಇಂದು ಆಕೆಯ ವಿಧಿ ಕೈಕೊಟ್ಟಿತ್ತು. ಮನೆಯ ಹಾಲ್ ನಲ್ಲಿ ನೇಣಿಗೆ ಕೊರಳೊಡ್ಡಿ ಪ್ರಾಣ ಕಳೆದುಕೊಂಡಿದ್ದಾಳೆ. […]