ಮಣಿಪಾಲ: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಆಸ್ಪತ್ರೆಯಲ್ಲಿ ಮೃತ್ಯು
ಮಣಿಪಾಲ: ಕೆಳಪರ್ಕಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಇಂದು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರನ್ನು ಉದ್ಯಮಿ ಮಣಿಪಾಲ ನಿವಾಸಿ ವಾಮನ ನಾಯಕ್ (58) ಎಂದು ಗುರುತಿಸಲಾಗಿದೆ. ವಾಮನ್ ಅವರು ಮೇ 28ರಂದು ಸ್ಕೂಟರ್‌ನಲ್ಲಿ ಕೆಳಪರ್ಕಳ ಕಡೆ ಹೋಗುತ್ತಿದ್ದ ವೇಳೆ ಟೆಂಪೊ ಚಾಲಕನೊಬ್ಬ ಅತೀ ವೇಗವಾಗಿ ಬಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಇದರ ಪರಿಣಾಮ ವಾಮನ್ ನಾಯ್ಕ್ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಮಣಿಪಾಲದ […]