ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಂದ ಮ್ಯಾಂಗ್ರೋವ್ ಗಿಡ ನೆಡುವ ಕಾರ್ಯಕ್ರಮ
ಉಡುಪಿ: ಜೂನ್ 05 ರಂದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜಿಲ್ಲಾ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು ಬ್ರಹ್ಮಾವರ ಅರಣ್ಯ ಇಲಾಖೆಯ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಕೋಡಿ ನದಿ ಪ್ರದೇಶದಲ್ಲಿ ಸುಮಾರು 11 ಸಾವಿರ ಮ್ಯಾಂಗ್ರೋವ್ ಗಿಡಗಳನ್ನು ನೆಡುವುದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿದರು. ಅವಕಾಶ ಮಾಡಿ ಕೊಟ್ಟ ಕಾಲೇಜಿನ ಪ್ರಾಶುಂಪಾಲರು, ಅರಣ್ಯ ಅಧಿಕಾರಿಗಳು, ಭಾಗವಹಿಸಿದ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳನ್ನು ರಾಜ್ಯ ಮುಕ್ತ ಆಯುಕ್ತರು ಮತ್ತು ಜಿಲ್ಲಾ ಮುಖ್ಯ ಆಯುಕ್ತರು ಅಭಿನಂದಿಸಿದರು.