ಮಂಗಳೂರು: ನೀರಿನಲ್ಲಿ ಮುಳುಗಿ ವ್ಯಕ್ತಿ ಮೃತ್ಯು

ಮಂಗಳೂರು: ಸಮುದ್ರಪಾಲಾಗುತ್ತಿದ್ದ ಸಹೋದರನ ಪುತ್ರಿಯನ್ನು ರಕ್ಷಿಸಲು ಹೋಗಿ ವ್ಯಕ್ತಿ ತಾನು ನೀರುಪಾಲಾದ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ನಡೆದಿದೆ. ಬೆಂಗಳೂರು ಶಿವಾಜಿನಗರದ ಎಚ್.ಪಿ.ಕೆ ರೋಡ್ ನಿವಾಸಿ ದಿ.ಖಝೂಮ್ ಅಬ್ದುಲ್ ಶೈಖ್ ಎಂಬವರ ಪುತ್ರ ಕೆ.ಎಮ್. ಸಾಜಿದ್ ಆಲಿ (45) ಮೃತ ದುರ್ದೈವಿ. ಹಿರಿಯ ಸಹೋದರನ ಪುತ್ರಿ ಸಮುದ್ರದಲ್ಲಿ ಆಟವಾಡುತ್ತಿದ್ದಾಗ ಅಲೆಗಳ ನಡುವೆ ಸಿಲುಕಿದ್ದನ್ನು ನೋಡಿ ಸಾಜಿದ್ ಆಲಿ ರಕ್ಷಿಸಿದ್ದಾರೆ, ಆದರೆ ಆ ವೇಳೆ ತಾವೇ ಅಲೆಗಳ ನಡುವೆ ಸಿಲುಕಿ ನೀರಿನಲ್ಲಿ ಮುಳುಗಿದ್ದಾರೆ. ನೀರಿನಲ್ಲಿ ಮುಳುಗಿ ವಾಪಸ್ ದಡಕ್ಕೆ […]