ಮಂಗಳೂರು: ಅಶ್ಲೀಲ ಸಂದೇಶ, ಮಾನಸಿಕ ಕಿರುಕುಳಕ್ಕೆ ಬೆದರಿ ಯುವತಿ ಆತ್ಮಹತ್ಯೆಗೆ ಯತ್ನ ಪ್ರಕರಣ; ಆರೋಪಿಯ ಬಂಧನ.

ಮಂಗಳೂರು: ಯುವತಿಯ ಎಫ್‌ಬಿ ಖಾತೆಯನ್ನು ಹ್ಯಾಕ್ ಮಾಡಿ ಅಶ್ಲೀಲ ಹಾಗೂ ಬೆದರಿಕೆ ಸಂದೇಶ ರವಾನಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಕೃತ್ಯಕ್ಕೆ ಮನನೊಂದ ಯುವತಿಯು ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆಗೆ ಸಂಬಂಧಿಸಿ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್ ಇಡ್ಯಾ ಗ್ರಾಮದ ನಿವಾಸಿ ಶಾರೀಕ್ ಬಂಧಿತ ಆರೋಪಿ. ಯುವತಿ ಆತ್ಮಹತ್ಯೆ ಯತ್ನ:ಮಂಗಳೂರು ಮಧ್ಯ ಗ್ರಾಮದ ನಿವಾಸಿಯಾದ ಸಂತ್ರಸ್ತೆಯ ಫೇಸ್ಬುಕ್ ಖಾತೆಯನ್ನು ಈತ ಹ್ಯಾಕ್ ಮಾಡಿ, ಅಶ್ಲೀಲ ಸಂದೇಶಗಳು ಮತ್ತು ಬೆದರಿಕೆ ಸಂದೇಶಗಳನ್ನು ಆಕೆಯ ಅಣ್ಣ ಹಾಗೂ […]