ಮಂಗಳೂರಿನಲ್ಲಿ ಪ್ರಥಮ ಬಾರಿಗೆ ವೇದಿಕೆಯ ಮೇಲೆ ನೈಜ ಗಾತ್ರದ ಆನೆ : ಕಲಾಭಿ (ರಿ ) ರಂಗೋತ್ಸವ
ಮಂಗಳೂರು : ‘ಕಲಾಭಿ’ ವತಿಯಿಂದ ಮಂಗಳೂರಿನಲ್ಲಿ ಪ್ರಥಮ ಬಾರಿಗೆ ವೇದಿಕೆಯ ಮೇಲೆ ನೈಜ ಗಾತ್ರದ ಆನೆಯನ್ನು ಬರಮಾಡಿಕೊಳ್ಳಲು ತಂಡ ತಯಾರಾಗಿದೆ. ದಶಕಗಳ ಹಿಂದೆ ಕಂಪನಿ ನಾಟಕಗಳಲ್ಲಿ ಜೀವಂತ ಆನೆ- ಒಂಟೆಗಳು ರಂಗದ ಮೇಲೆ ಬಂದು ರಂಜಿಸುವಷ್ಟು ಕನ್ನಡ ರಂಗಭೂಮಿ ಶ್ರೀಮಂತವಾಗಿತ್ತು,ಈ ಕಾಲಘಟ್ಟದಲ್ಲಿ ಸರಳ ರಂಗತಂತ್ರಗಳ ಮೂಲಕ ಹೆಣೆದ ನಾಟಕಗಳನ್ನು ಕಟ್ಟಲಾಗುತ್ತದೆ.ಆದರೆ ಈಗ ಮಂಗಳೂರಿನ ಕಲಾಭಿ ಸಂಸ್ಥೆ ಗತಕಾಲದ ಕನ್ನಡ ರಂಗಭೂಮಿಯ ವೈಭವವನ್ನು ನೆನಪಿಸುವ ಅಮೋಘ ಪ್ರಯೋಗವನ್ನು ಮಂಗಳೂರಿಗರಿಗೆ ಉಣಬಡಿಸಲಿದೆ. ಕಲಾಭಿಯ “ಎ ಫ್ರೆಂಡ್ ಬಿಯಾಂಡ್ ದಿ ಫೆನ್ಸ್” […]