ಮಂಗಳೂರು:ಮಾನಸಿಕ ಆರೋಗ್ಯ ದಿನಾಚರಣೆ:“ಬೀಕನ್ ಬಡ್ಡೀಸ್” ಮಕ್ಕಳ ಹಕ್ಕುಗಳ ಕ್ಲಬ್ ಉದ್ಘಾಟನೆ

ಮಂಗಳೂರು : ಪ್ರಸಕ್ತ ದಿನಗಳಲ್ಲಿ ಮಕ್ಕಳ ಮಾನಸಿಕ ಸಮಸ್ಯೆ ಆತಂಕಕಾರಿಯಾಗಿದೆ. ಪೊಲೀಸ್ ಠಾಣೆಗೆ ಬರುತ್ತಿರುವ ಯುವಜನತೆಯ ಸಮಸ್ಯೆಗಳು ಗಾಬರಿ ಹುಟ್ಟಿಸುತ್ತದೆ. ಶಾಲಾ ಕಾಲೇಜುಗಳು ಉತ್ತಮ ಮೌಲ್ಯ ಮತ್ತು ಶಿಸ್ತುಬದ್ಧ ಶಿಕ್ಷಣವನ್ನು ನೀಡಿದರೆಉತ್ತಮ ನಾಗರಿಕರನ್ನು ನಿರ್ಮಾಣ ಮಾಡಬಹುದು. ಇಂಥ ಸೇವೆಯನ್ನು ಎಕ್ಸ್ ಪರ್ಟ್ ಶಿಕ್ಷಣ ಸಂಸ್ಥೆ ಮಾಡುತ್ತಿದೆ ಎಂದು ಮಂಗಳೂರಿನ ಕಂಕನಾಡಿ ಪಟ್ಟಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಟಿ. ಡಿ. ನಾಗರಾಜ್ ಅವರು ಹೇಳಿದರು. ಮಾನಸಿಕ ಆರೋಗ್ಯ ದಿನಾಚರಣೆಯಂಗವಾಗಿ ವಳಚ್ಚಿಲ್ ಎಕ್ಸ್ ಪರ್ಟ್ ಪದವಿಪೂರ್ವ ಕಾಲೇಜಿನಲ್ಲಿ “ಸಹಪಾಠಿಗಳ […]