ಕೆ.ಎಸ್.ಆರ್.ಟಿ ಸಿ ‘ಮಂಗಳೂರು ದಸರಾ ದರ್ಶನ’ಕ್ಕೆ ಭರ್ಜರಿ ಬೇಡಿಕೆ: ಟೂರು ಪ್ಯಾಕೇಜ್ ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ
ಮಂಗಳೂರು: ಕೆ.ಎಸ್.ಆರ್.ಟಿ ಸಿ ಮಂಗಳೂರು ವಿಭಾಗದ ‘ಮಂಗಳೂರು ದಸರಾ ದರ್ಶನ’ಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಸಂಸ್ಥೆಯ ಹಿರಿಯ ವಿಭಾಗಾಧಿಕಾರಿ ರಾಜೇಶ್ ಶೆಟ್ಟಿ ಹೇಳಿದ್ದಾರೆ. ಮಂಗಳೂರು ದಸರಾ ದರ್ಶನಕ್ಕೆಂದೆ ಒಂಬತ್ತು ಬಸ್ ಗಳನ್ನು ಮೀಸಲಿರಿಸಲಾಗಿದ್ದು, ಕಳೆದ ವರ್ಷದಂತೆ ಈ ವರ್ಷವೂ ಸಾರ್ವಜನಿಕರಿಂದ ಟಿಕೆಟ್ ಗಾಗಿ ಬೇಡಿಕೆ ಬಂದಿದೆ. ಪ್ರಸ್ತುತ 6-7 ಬಸ್ ಗಳು ಓಡಾಡುತ್ತಿದ್ದು, ವಾರಾಂತ್ಯ ಮತ್ತು ಅ.21 ರ ಬಳಿಕ ಜನದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಕೊಲ್ಲೂರು ಮತ್ತು ನಗರ […]