ತುಳು ಲಾಂಛನದ ಶಾಲು ಧರಿಸಿ ತುಳುನಾಡಿನ ಹೆಸರಲ್ಲಿ ಶಾಸಕ ವೇದವ್ಯಾಸ್ ಕಾಮತ್ ಪ್ರಮಾಣವಚನ ಸ್ವೀಕಾರ
ಮಂಗಳೂರು: ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಅವರು ಪ್ರಮಾಣವಚನ ಸ್ವೀಕರಿಸಿದ್ದು, ತುಳುನಾಡು, ಭಾರತಮಾತೆ ಮತ್ತು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ತುಳುನಾಡಿನ ಲಾಂಛನವಿರುವ ಶಾಲು ಧರಿಸಿ ಗಮನಸೆಳೆದಿದ್ದಾರೆ.