ಮಂಗಳೂರು: ನಿಫಾ ಶಂಕೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯ ವರದಿ ನೆಗೆಟಿವ್
ಮಂಗಳೂರು: ನಿಫಾ ಸೋಂಕಿನ ಶಂಕೆಯಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಗೋವಾದಿಂದ ಬಂದಿದ್ದ ವ್ಯಕ್ತಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದ್ದಾರೆ. ಇವರು ಗೋವಾದಲ್ಲಿ ಆರ್ಟಿ-ಪಿಸಿಆರ್ ಕಿಟ್ ತಯಾರಿಸುವ ಪ್ರಯೋಗಾಲಯದಲ್ಲಿ ಮೈಕ್ರೊ ಬಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಇವರಿಗೆ ಜ್ವರ ಕಾಣಿಕೊಂಡಿತ್ತು. ಜ್ವರದ ಲಕ್ಷಣಗಳನ್ನು ಆಧರಿಸಿ, ನಿಫಾ ಎಂದು ಶಂಕಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಗಂಟಲು ದ್ರವ, ರಕ್ತ ಮತ್ತು ಮೂತ್ರ ಮಾದರಿಯನ್ನು ಸಂಗ್ರಹಿಸಿ, ಪುಣೆಯ ಪ್ರಯೋಗಾಲಯಕ್ಕೆ ತಪಾಸಣೆಗಾಗಿ […]