ಮಂಗಳೂರು:ಯುನಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಫಿಲಿಪ್ಸ್ ಅಝುರಿಯನ್ ಕ್ಯಾಥ್‌ಲ್ಯಾಬ್ ಉದ್ಘಾಟನೆ

ಮಂಗಳೂರು : ಯುನಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಫಿಲಿಪ್ಸ್ ಅಝುರಿಯನ್ ಕ್ಯಾಥ್‌ಲ್ಯಾಬ್ ವರ್ಶನ್ 3.0 ಅನ್ನು ಆರಂಭಿಸಲಾಗಿದೆ. ಕರಾವಳಿ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಅತ್ಯಾಧುನಿಕ ವಿಶ್ವದರ್ಜೆಯ ಚಿಕಿತ್ಸೆ ಮಂಗಳೂರಿನ ಜನರಿಗೆ ಯುನಿಟಿ ಆಸ್ಪತ್ರೆಯಲ್ಲಿ ದೊರೆಯಲಿದೆ. ಹೃದಯ, ನರ ಹಾಗೂ ಇತರ ರೇಡಿಯಾಲಜಿ ಚಿಕಿತ್ಸೆಗಳಿಗೆ ಈ ಹೊಸ ಕ್ಯಾಥ್‌ಲ್ಯಾಬ್ ಸಹಕಾರಿಯಾಗಲಿದೆ. ಕ್ಯಾಥ್‌ಲ್ಯಾಬ್ ವೈಶಿಷ್ಟ್ಯಗಳು:- ಸುಧಾರಿತ ಚಿತ್ರಣ ಮತ್ತು ನಿಖರತೆ : ಹೃದಯ ಹಾಗೂ ಮೆದುಳಿನ ಶಸ್ತ್ರಚಿಕಿತ್ಸೆ ವೇಳೆ ಉತ್ತಮ ಗುಣಮಟ್ಟದ ಚಿತ್ರಣ ಒದಗಿಸುವುದರಿಂದ ವೈದ್ಯರಿಗೆ ಹೆಚ್ಚು ನಿಖರವಾದ ಚಿಕಿತ್ಸೆ […]