ಮಂಗಳೂರು: ಪೆಟ್ರೋಲ್ ಬಂಕ್ ಮ್ಯಾನೇಜರ್ ಗೆ ಹಲ್ಲೆಗೈದು ಲಕ್ಷಾಂತರ ರೂಪಾಯಿ ಸುಲಿಗೆ

ಮಂಗಳೂರು: ಬ್ಯಾಂಕ್ ಗೆ ಹಣ ಹಾಕಲು ಬೈಕ್ ನಲ್ಲಿ ಹೋಗುತ್ತಿದ್ದ ಪೆಟ್ರೋಲ್ ಬಂಕ್ ಮ್ಯಾನೇಜರ್ ಓರ್ವರನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ಹಲ್ಲೆಗೈದು ₹4.20 ಲಕ್ಷ ಸುಲಿಗೆ ಮಾಡಿದ ಘಟನೆ ಮಂಗಳೂರಿನ ಚಿಲುಂಬಿ ಬಳಿ ನಡೆದಿದೆ. ಗಾಂಧಿನಗರದ ಆಶೀರ್ವಾದ್ ಪೆಟ್ರೋಲ್ ಬಂಕ್ ಮ್ಯಾನೇಜರ್ ಬೋಜಪ್ಪ ಅವರು ಬೈಕ್ ನಲ್ಲಿ ಬ್ಯಾಂಕ್ ಗೆ ಹಣ ಹಾಕಲು ಹೋಗುತಿದ್ದರು. ಈ ವೇಳೆ ದುಷ್ಕರ್ಮಿಗಳು ಬ್ಯಾಟ್ ನಿಂದ ಹಲ್ಲೆಗೈದು ಹಣ ಸುಲಿಗೆ ಮಾಡಿದ್ದಾರೆ. ಈ ಬಗ್ಗೆ ಮಂಗಳೂರಿನ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.