ಮಂಗಳೂರು: ಲಿಫ್ಟ್ ನಲ್ಲಿ ಸಿಲುಕಿ ವ್ಯಕ್ತಿ ಸಾವು

ಮಂಗಳೂರು: ಮದುವೆ ಹಾಲ್‌ನಲ್ಲಿ ಲಿಫ್ಟ್ ಕೆಟ್ಟುಹೋದ ಪರಿಣಾಮ ವ್ಯಕ್ತಿಯೊಬ್ಬರು ಲಿಫ್ಟ್‌ನಲ್ಲಿ ಸಿಲುಕಿ ಮೃತಪಟ್ಟ ಘಟನೆ ಮಂಗಳೂರು ಹೊರವಲಯದ ತೊಕ್ಕೊಟ್ಟು ಸಮೀಪದ ಕಲ್ಲಾಪು ಎಂಬಲ್ಲಿ ನಡೆದಿದೆ. ತುಂಬೆಯ ವಳವೂರಿನ ಹಂಝ (30) ಮೃತಪಟ್ಟ ವ್ಯಕ್ತಿ. ರಾ.ಹೆ. 66ರ ಕಲ್ಲಾಪುವಿನಲ್ಲಿರುವ ಯುನಿಟಿ ಹಾಲ್‌ನಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಕ್ಯಾಟರಿಂಗ್ ಕೆಲಸ ಮಾಡಲು  ಹಂಝ ಬಂದಿದ್ದರು. ಈ ವೇಳೆ ಲಿಫ್ಟ್‌ನಲ್ಲಿ ಬರುತ್ತಿದ್ದಾಗ ಲಿಫ್ಟ್‌ನ ರೋಪ್ ಸಡಿಲಗೊಂಡ ಪರಿಣಾಮ ಆಯ ತಪ್ಪಿ ಬಿದ್ದ ಹಂಝ ಲಿಫ್ಟ್‌ನೊಳಗೆ ಸಿಲುಕಿ ಗಂಭೀರ ಗಾಯಗೊಂಡರು. ಕೂಡಲೇ ಗಾಯಗೊಂಡ […]