ಮಂಗಳೂರು: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ; ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ – ನ್ಯಾಯಾಲಯ ತೀರ್ಪು

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ಗರ್ಭವತಿಯನ್ನಾಗಿಸಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ (ಪೊಕ್ಸ್‌-ಎಫ್‌ಟಿ ಎಸ್‌ಸಿ-2 ) ನ್ಯಾಯಾಧೀಶ ಮಾನು ಕೆ.ಎಸ್. 20 ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ನಗರದಲ್ಲಿ ಆಟೋ ಚಾಲಕನಾಗಿರುವ ಮೂಲತ: ಬಾಗಲಕೋಟೆಯ ನಾಗರಾಜ್ ಶಿವಪ್ಪದುರಗಣ್ಣವರ (21) ಶಿಕ್ಷೆಗೊಳಗಾದ ಆರೋಪಿ.ಈತ ತನ್ನ ತಾಯಿಯ ಪರಿಚಯದ ಮಹಿಳೆಯ ಪುತ್ರಿಯ ಜೊತೆಗೆ ಅನ್ನೋನ್ಯವಾಗಿದ್ದು, ಆಕೆಯ ಮನೆಗೂ ಆಗಾಗ್ಗೆ ಹೋಗುತ್ತಿದ್ದ ಎನ್ನಲಾಗಿದೆ. 2025ರ […]