ಮಂಗಳೂರು: ‘ಕಾಸ್ಕ್’ ಸಂಸ್ಥೆಯ ಮಹಾಸಭೆ ಮತ್ತು ಪುನರ್ಮಿಲನ

ಮಂಗಳೂರು: ಬೆಂದೂರ್ ಚರ್ಚ್ ಸಭಾಂಗಣದಲ್ಲಿ ಕಾಸ್ಕ್ ಸಂಸ್ಥೆಯ ವಾರ್ಷಿಕ ಮಹಾಸಭೆಯು ಸಪ್ಟೆಂಬರ್ 21ರಂದು ನಡೆಯಿತು. ಮಹಾಸಭೆಯ ನಂತರ ಸದಸ್ಯರು ಹಾಗೂ ಅವರ ಕುಟುಂಬ ಸದಸ್ಯರ ಪುನರ್ಮಿಲನ ಸಮಾರಂಭವು ನೆರವೇರಿತು. ಫ್ಲೋರಾ ಕ್ಯಾಸ್ಟೆಲಿನೊ ಸಂಚಾಲನೆಯಲ್ಲಿ ಕೊಂಕಣಿ ಸಂಸ್ಕೃತಿ ಮತ್ತು ಪರಂಪರೆಯ ಅನೇಕ ಕಾರ್ಯಕ್ರಮಗಳು ನೆರವೇರಿದವು. ರೆಮೋನಾ ಇವೆಟ್ ಪಿರೇರಾ ಭರತನಾಟ್ಯವನ್ನು ಪ್ರದರ್ಶಿಸಿದರು. ಇತ್ತೀಚೆಗೆ ನಡೆದ 120 ಗಂಟೆಗಳ ಪ್ರದರ್ಶನ ಮತ್ತು ವಿಶ್ವ ದಾಖಲೆಗಾಗಿ ಅವರನ್ನು ಅಭಿನಂದಿಸಲಾಯಿತು. ಅವರ ಅಸಾಧಾರಣ ಸಾಧನೆಗಾಗಿ ಪ್ರತಿಷ್ಠಿತ ‘ಕಾಸ್ಕ್ ಮೊತಿಯಾಂ’ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. […]