ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧಾರಾವಾಹಿ ನಟಿ ರಾಧಿಕಾ

ಬೆಂಗಳೂರು: ಕನ್ನಡ ಧಾರಾವಾಹಿ ‘ಮಂಗಳಗೌರಿ ಮದುವೆ’ ನೆಗೆಟಿವ್ ರೋಲ್ ನಲ್ಲಿ ಅಭಿನಯಿಸುತ್ತಿರುವ ನಟಿ ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿ ರಾಧಿಕಾ ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಮಂಗಳಗೌರಿ ಮದುವೆ’ ಧಾರಾವಾಹಿಯಲ್ಲಿ ಸೌಂದರ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಅವರು ನಟ, ನಿರ್ದೇಶಕ ಶ್ರವಂತ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿ ರಾಧಿಕಾ ಈ ಹಿಂದೆ ನಟ ವಿಜಯ್ ರಾಜ್‍ಕುಮಾರ್ ಅಭಿನಯದ ‘ಗ್ರಾಮಾಯಣ’ ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ‘ಪರಾರಿ’, ‘ಅಂಬರ’ ಮತ್ತು ‘ಚಿಕ್ಕಮಗಳೂರು ಚಿಕ್ಕಮಲ್ಲಿಗೆ’ ಸಿನಿಮಾದಲ್ಲಿ ಶ್ರವಂತ್ ಕೂಡ ನಟಿಸಿದ್ದಾರೆ. ‘ಮಧುಬಾಲ’ ಧಾರಾವಾಹಿಯಲ್ಲಿ […]