ಮಂಡ್ಯ ಹನುಮ ಧ್ವಜ ತೆರವು ಪ್ರಕರಣ: ಜಿಲ್ಲಾಧಿಕಾರಿ ಸಂಧಾನ ಯಶಸ್ವಿ; ಬಂದ್ ಗೆ ತಾತ್ಕಾಲಿಕ ತಡೆ

ಮಂಡ್ಯ: ಮಂಡ್ಯ ಕೆರೆಗೋಡು ಹನುಮ ಧ್ವಜ ತೆರವು ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿದ್ದು, ವಿವಾದ ಸಂಬಂಧ ಜಿಲ್ಲಾಧಿಕಾರಿಗಳು ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದೆ. ನಾಳೆ(ಫೆ.7) ನಡೆಯಬೇಕಿದ್ದ ಮಂಡ್ಯ ಬಂದ್ ಅನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಕೆರಗೋಡು ಹನುಮ ಧ್ವಜ ತೆರವು ವಿರೋಧಿಸಿ ಫೆ.9ಕ್ಕೆ ಭಜರಂಗದಳ ಬಂದ್ ಗೆ ಕರೆ ಕೊಟ್ಟಿದೆ. ಮತ್ತೊಂದೆಡೆ ಭಜರಂಗದಳ ಬಂದ್ ಕರೆ ವಿರೋಧಿಸಿ ಫೆ.7 ಕ್ಕೆ ಸಮಾನ ಮನಸ್ಕರ ವೇದಿಕೆ ಬಂದ್​ಗೆ ಕರೆ ಕೊಟ್ಟಿತ್ತು. ಸಮಾನ ಮನಸ್ಕರ ವೇದಿಕೆಗೆ ದಲಿತ ಪರ ಸಂಘಟನೆ, […]

ಭಾರತ್ ಜೋಡೋ ಯಾತ್ರೆ ಪೋಸ್ಟರ್‌ನಲ್ಲಿ ಸಾವರ್ಕರ್: ದುಷ್ಕರ್ಮಿಗಳ ಕೃತ್ಯ ಎಂದ ಕಾಂಗ್ರೆಸ್

ಮಂಡ್ಯ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಪೋಸ್ಟರಿನಲ್ಲಿ ವಿನಾಯಕ ದಾಮೋದರ್ ಸಾವರ್ಕರ್ ಅವರ ಚಿತ್ರವನ್ನು ಹಾಕಲಾಗಿದ್ದು, ಕಾಂಗ್ರೆಸ್ ಪಕ್ಷವು ಇದು ಯಾರೋ ದುಷ್ಕರ್ಮಿಗಳ ಕೃತ್ಯ ಎಂದು ಆರೋಪಿಸಿದೆ. ಈ ಹಿಂದೆ ಕೇರಳದಲ್ಲಿಯೂ ಸಾವರ್ಕರ್ ಅವರ ಚಿತ್ರವನ್ನು ಹೊಂದಿರುವ ಪೋಸ್ಟರ್ ಒಂದನ್ನು ಹಾಕಲಾಗಿತ್ತು. ಇದೀಗ ಮಂಡ್ಯದಲ್ಲಿ ರಾಹುಲ್ ಗಾಂಧಿ ಇರುವ ಪೋಸ್ಟರಿನಲ್ಲಿ ಮತ್ತೆ ಸಾವರ್ಕರ್ ಭಾವಚಿತ್ರ ಹಾಕಲಾಗಿರುವುದು ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ.

ಮೂಲಮಂದಿರ ಚಲೋ ಅಭಿಯಾನ: ಶ್ರೀರಂಗಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ

ಮಂಡ್ಯ: ಹಿಂದೂ ಸಂಘಟನೆಗಳು ಶನಿವಾರ ಕರೆ ನೀಡಿರುವ “ಮೂಲಮಂದಿರ ಚಲೋ” ಅಭಿಯಾನದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಇಂದು ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಸೆಕ್ಷನ್ 144 ಸಿಆರ್‌ಪಿಸಿ ಜಾರಿಯಾಗಿದ್ದು, ಜಾಮಿಯಾ ಮಸೀದಿಯ ಆವರಣದ ಸುತ್ತ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ ಎಂದು ಹೇಳಲಾಗುತ್ತಿರುವ ಜಾಮಿಯಾ ಮಸೀದಿಯಲ್ಲಿ ಪೂಜೆಗೆ ಅವಕಾಶ ನೀಡಬೇಕೆಂದು ಹಿಂದೂ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ. ಈ ಹಿನ್ನೆಲೆಯಲ್ಲಿ “ಮೂಲಮಂದಿರ ಚಲೋ” ಎನ್ನುವ ಅಭಿಯಾನವನ್ನು ಕೈಗೊಂಡಿವೆ. ಪಟ್ಟಣದ ಕುವೆಂಪು ವೃತ್ತದಿಂದ ಜಾಮಿಯಾ […]

ಚರ್ಮರೋಗ ಪೀಡಿತನ ಆಧಾರ್ ಕಾರ್ಡ್ ಸಮಸ್ಯೆಗೆ ಒಂದೇ ಟ್ವೀಟ್ ನಿಂದ ದೊರಕಿತು ನಾಲ್ಕೇ ದಿನಗಳಲ್ಲಿ ಪರಿಹಾರ!

ಮಂಡ್ಯ : ಬಗೆಯರಿಯದೇ ಉಳಿದಿದ್ದ ಆಧಾರ್ ಕಾರ್ಡ್ ಸಮಸ್ಯೆಯೊಂದು ಕೇವಲ ಒಂದೇ ಟ್ವೀಟ್ ನಿಂದ ನಾಲ್ಕೇ ದಿನಗಳಲ್ಲಿ ಬಗೆಹರಿದಿದೆ. ಮಂಡ್ಯದ ತಂಡಸನಹಳ್ಳಿಯ ನೂತನ್ ಎನ್ನುವ ಯುವಕ ವಿಚಿತ್ರ ಚರ್ಮ ರೋಗದಿಂದ ಬಳಲುತ್ತಿದ್ದು, ಆತನ ಆಧಾರ್ ಕಾರ್ಡ್ ಲಭ್ಯವಿರಲಿಲ್ಲವಾದ್ದರಿಂದ ಆತನಿಗೆ ಸರಕಾರದ ಯಾವುದೇ ಸವಲತ್ತುಗಳು ದೊರೆಯುತ್ತಿರಲಿಲ್ಲ. ನೂತನ್ ನ ಈ ಸಮಸ್ಯೆಯ ಬಗ್ಗೆ ಯುವ ರೈತ ಮುಖಂಡ, ‘ಸಾವಯವ ಮಂಡ್ಯ’ದ ಸಿಇಒ ಮತ್ತು ಸಂಸ್ಥಾಪಕ ಮಧುಚಂದನ್ ಎಸ್ ಸಿ ಗಮನಹರಿಸಿದ್ದಾರೆ. ಮಧುಚಂದನ್ ಈ‌ ಬಗ್ಗೆ ಟ್ವೀಟ್ ಮಾಡಿ ನೂತನ್ […]