ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ:ಇಂದು ಅಷ್ಟಪವಿತ್ರ ನಾಗಮಂಡಲೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮ

ಬ್ರಹ್ಮಾವರ: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇಂದು ಅಷ್ಟಪವಿತ್ರ ನಾಗಮಂಡಲೋತ್ಸವ ನಡೆಯಲಿದೆ. ಎ.11ರಂದು ಬೆಳಗ್ಗೆ ಶ್ರೀ ಅಮ್ಮನವರಿಗೆ ಪಂಚವಿಂಶತಿ ದ್ರವ್ಯಕಲಶ, ವಿವಿಧ ಹೋಮಗಳು, ಕಲಶಾಭಿಷೇಕ, ಮಹಾ ಪೂಜೆ, ನಾಗ ದೇವರಿಗೆ ಪವಮಾನ ಕಲಾಶಾಭಿಷೇಕ, ರಾತ್ರಿ ನಾಗ ಮಂಡಲ ಚಪ್ಪರದಲ್ಲಿ ರಾಕ್ಷೋಘ್ನ ಹೋಮ, ವಾಸ್ತು ಪೂಜಾ ಬಲಿ, ನಾಗದೇವರ ಸನ್ನಿಧಿಯಲ್ಲಿ ಅಶ್ಲೇಷಾ ಬಲಿ ಪೂಜಾ ಕಾರ್ಯಕ್ರಮ, ಇಂದು ಬೆಳಗ್ಗೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಅನಂತರ ಮಹಾ ಮಂಗಳಾರತಿ, ನಾಗ ದರ್ಶನ, ಪಲ್ಲ ಪೂಜೆ, ಮಹಾಪ್ರಸಾದ ವಿತರಣೆ, ಮಧ್ಯಾಹ್ನ […]