ಯುವ ಜನತೆ ಕನ್ನಡ ಭಾಷೆ ಹಾಗೂ ಜಾನಪದ ಪ್ರಕಾರಗಳನ್ನು ಉಳಿಸಿ ಬೆಳೆಸಬೇಕು: ವಿದುಷಿ ಮಾನಸಿ ಸುಧೀರ್
ನಿಟ್ಟೆ: ಯುವಕ, ಯುವತಿಯರಲ್ಲಿ ಕನ್ನಡದ ಬಗೆಗಿನ ಒಲವು ಹಾಗೂ ಅಭಿಮಾನ ಹೆಚ್ಚುತ್ತಿರುವುದು ಸ್ವಾಗತಾರ್ಹ. ಜಾನಪದ ಪ್ರಕಾರಗಳನ್ನು ಇಂದಿನ ಜನತೆ ಅಭ್ಯಸಿಸಿ ಮುಂದಿನ ಪೀಳಿಗೆಗೆ ಕಲಾಪ್ರಕಾರವನ್ನು ದಾಟಿಸುವುದು ಅಗತ್ಯ ಎಂದು ಚಲನಚಿತ್ರ, ಕಾವ್ಯಾಭಿನಯ ಹಾಗೂ ನೃತ್ಯ ಕಲಾವಿದೆ ವಿದುಷಿ ಮಾನಸಿ ಸುಧೀರ್ ಅಭಿಪ್ರಾಯಪಟ್ಟರು. ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ‘ದಿವ್ಯಾಂಕುರ’ ಕನ್ನಡ ರಾಜ್ಯೋತ್ಸವ ಸಮಾರಂಭ ಹಾಗೂ ಸಾಂಸ್ಕೃತಿಕ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯ, ಸಂಸ್ಕೃತಿ, ಕಲಾವಿದರು, ಪ್ರಾಂತ್ಯಾವಾರು ವಿವಿಧ ಬಗೆಯ ಕಲಾಪ್ರಕಾರಗಳು, ತಿಂಡಿ ತಿನಿಸುಗಳು […]
ಶಕಲಕ ಬೂಂ ಬೂಂ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಮಿಂಚಲಿರುವ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್
ಉಡುಪಿ: ತುಳುನಾಡಿನ ಬಹು ನಿರೀಕ್ಷಿತ ಶಕಲಕ ಬೂಂ ಬೂಂ ಚಲನಚಿತ್ರ ಡಿಸೆಂಬರ್ 16 ರಂದು ಬಿಡುಗಡೆಗೊಳ್ಳಲಿದೆ. ತುಳು ಚಲನಚಿತ್ರ ಇತಿಹಾಸದಲ್ಲೆ ಮೊದಲ ಬಾರಿಗೆ ಅರವಿಂದ್ ಬೋಳಾರ್ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜೀನೀ ಪಾತ್ರದಲ್ಲಿರುವ ಬೋಳಾರ್ ಅವರ ಪೋಸ್ಟರ್ ಅನ್ನು ಕಾಂತಾರ ಚಿತ್ರದ ನಾಯಕನ ತಾಯಿಯ ಪಾತ್ರ ಮಾಡಿದ ಮಾನಸಿ ಸುಧೀರ್ ದೊಡ್ದಣ್ಣಗುಡ್ಡೆಯಲ್ಲಿ ಬಿಡುಗಡೆಗೊಳಿಸಿ ಶುಭಹಾರೈಸಿದರು. ವೇದಿಕೆಯಲ್ಲಿ ಚಿತ್ರದ ನಿರ್ಮಾಪಕ ನಿತ್ಯಾನಂದ ನರಸಿಂಗೆ, ನರಸಿಂಗೆ ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ್ ಸಾಲ್ವನ್ಕಾರ್, ಆನಂದ ನಾಯಕ್, ಸುಧೀರ್ ಕೊಡವೂರ್, ನಿರ್ದೇಶಕ […]
ಶಕಲಕ ಬೂಮ್ ಬೂಮ್ ರಸಪ್ರಶ್ನೆ ಸ್ಪರ್ಧೆಯ ಪೋಸ್ಟರ್ ಬಿಡುಗಡೆಗೊಳಿಸಿದ ಮಾನಸಿ ಸುಧೀರ್
ಉಡುಪಿ: ತುಳುನಾಡಿನ ಮೊಟ್ಟಮೊದಲ ತುಳು ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಶಕಲಕ ಬೂಮ್ ಬೂಮ್ ಪೋಸ್ಟರಿನಲ್ಲಿರುವ ವ್ಯಕ್ತಿಯನ್ನು ಗುರುತಿಸಿ ಬಹುಮಾನ ಗೆಲ್ಲಿ ಎನ್ನುವ ರಸಪ್ರಶ್ನೆಯನ್ನು ಆಯೋಜಿಸಲಾಗಿದ್ದು, ಇದಕ್ಕೆ ಅಭೂತಪೂರ್ವ ಸ್ಪಂದನೆ ದೊರಕಿತ್ತು. ಭಾನುವಾರದಂದು ನರಸಿಂಗೆಯಲ್ಲಿ ಕಾಂತಾರಾ ಖ್ಯಾತಿಯ ಮಾನಸಿ ಸುಧೀರ್ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿ ಸರಿ ಉತ್ತರ ನೀಡಿದ ವಿಜೇತರ ಹೆಸರನ್ನು ಬಹಿರಂಗಪಡಿಸಿದರು. ಚಿತ್ರದ ಪೋಸ್ಟರಿನಲ್ಲಿ ನಟ ಅರವಿಂದ ಬೋಳಾರ್ ಅವರು ಜೀನೀ ಪಾತ್ರದಲ್ಲಿದ್ದು, ಎರಡೂ ಸರಿ ಉತ್ತರ ನೀಡಿದವರಲ್ಲಿ ಪವನ್ ಮಡಿವಾಳ ಮತ್ತು ಒಂದು ಸರಿ […]