ಉಡುಪಿ: ಪ್ರವಾಸಕ್ಕೆ ಬಂದಿದ್ದ ವ್ಯಕ್ತಿ‌ ಮೃತ್ಯು

ಉಡುಪಿ: ಉಡುಪಿ ಜಿಲ್ಲೆಗೆ ಪ್ರವಾಸಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ವಾಹನದಲ್ಲೇ ಮೃತಪಟ್ಟ ಘಟನೆ ಹಿರಿಯಡಕ ಸಮೀಪ ನಡೆದಿದೆ. ಮೃತರನ್ನು ಚಿತ್ರದುರ್ಗ ಆಲಗಟ್ಟಿ ನಿವಾಸಿ ಚೆನ್ನಬಸಪ್ಪ ಎಂಬವರ ಮಗ ಟಿ.ಸಿ.ಶಿವಕುಮಾರ್ (39) ಎಂದು ಗುರುತಿಸಲಾಗಿದೆ. ಇವರು ಫೆ.28ರಂದು ರಾತ್ರಿ ಸಂಬಂಧಿಕರೊಂದಿಗೆ ವಾಹನದಲ್ಲಿ ಸಿಂಗದೂರು, ಧರ್ಮಸ್ಥಳ, ಉಡುಪಿ ಕಡೆಗೆ ಪ್ರವಾಸ ಹೊರಟಿದ್ದರು. ಮಾ. 1ರಂದು ಹಿರಿಯಡಕ ಬಳಿ ಪೆಟ್ರೋಲ್ ಬಂಕ್ ಬಳಿ ಎಲ್ಲರು ತಿಂಡಿ ತಿನ್ನಲು ವಾಹನದಿಂದ ಇಳಿದಿದ್ದು, ಶಿವಕುಮಾರ್ ಒಬ್ಬರೇ ವಾಹನದಲ್ಲಿ ಮಲಗಿದ್ದರು. ಬಳಿಕ ಅವರು ಅಸ್ವಸ್ಥಗೊಂಡು ಸೀಟಿನಿಂದ ಬಿದ್ದಿದ್ದು, […]