ಮಲ್ಪೆಯ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್’ನಿಂದ ವಿಲ್ಸನ್ ಎಎಸ್‌ಎ ಕಾರ್ಗೋ ಶಿಪ್ ಹಸ್ತಾಂತರ

ಮಲ್ಪೆ: ಕೇಂದ್ರದ ಬಂದರು, ಶಿಪ್ಪಿಂಗ್ ಹಾಗೂ ವಾಟರ್‌ವೇ ಸಚಿವಾಲಯದ ಆಡಳಿತಕ್ಕೊಳಪಟ್ಟ ಕೊಚ್ಚಿನ್ ಶಿಪ್‌ಯಾರ್ಡ್ ಲಿ.ನ. ಸಹಸಂಸ್ಥೆ ಮಲ್ಪೆಯ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ(ಯುಸಿಎಸ್‌ಎಲ್) ನಿರ್ಮಾಣಗೊಂಡ 3800 ಟಿಡಿಡಬ್ಲ್ಯು (ಟೋಟೆಲ್ ಡೆಡ್‌ವೆಯ್ಟ್) ಸಾಮರ್ಥ್ಯದ ಜನರಲ್ ಕಾರ್ಗೋ ಹಡಗುಗಳ ಸರಣಿಯ ಮೊದಲ ಹಡಗನ್ನು ಇಂದು ಮಲ್ಪೆಯ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು. ಕೊಚ್ಚಿನ್ ಶಿಪ್‌ಯಾರ್ಡ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮಧು ಎಸ್.ನಾಯರ್ ಅವರು 14 ಹಡಗುಗಳ ಸರಣಿ ಯಲ್ಲಿ ಮೊದಲ ಹಡಗನ್ನು ಹೊಸದಿಲ್ಲಿಯಲ್ಲಿರುವ ರಾಯಲ್ ನಾರ್ವೆಯನ್ ರಾಯಭಾರ ಕಚೇರಿಯ ಸಚಿವರ […]