ಮಲ್ಪೆ: ಮೀನುಗಾರ ನಾಪತ್ತೆ

ಉಡುಪಿ: ಮಲ್ಪೆ ಬಂದರಿನಲ್ಲಿ ರಾಜ್‌ಕುಮಾರ್ ಎಂಬ ಹೆಸರಿನ ಮೀನುಗಾರಿಕಾ ಬೋಟಿನಲ್ಲಿ ಕೆಲಸ ಮಾಡಿಕೊಂಡಿದ್ದ ಕುಂದಾಪುರ ತಾಲೂಕು ನಾಡ ಗ್ರಾಮದ ಪಡುಕೋಣೆ ಕಡೆಕಟ್ಟೆ ಮನೆ ನಿವಾಸಿ ಪ್ರಕಾಶ್ (40) ಎಂಬುವವರು ಮಾರ್ಚ್ 14 ರಿಂದ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.