ಮಲಬಾರ್ ಗೋಲ್ಡ್: ಸಿಆರ್ ಎಸ್ ಯೋಜನೆಯಡಿ ವಿದ್ಯಾರ್ಥಿವೇತನ- ಸಹಾಯಧನ ವಿತರಣೆ

ಉಡುಪಿ: ಮಲಬಾರ್‌ ಗೋಲ್ಡ್‌ ಅಂಡ್‌ ಡೈಮಂಡ್‌ ಉಡುಪಿ ಸಂಸ್ಥೆಯ ಸಿಆರ್‌ಎಸ್‌ ಯೋಜನೆಯಡಿಯಲ್ಲಿ ವಿದ್ಯಾರ್ಥಿ ವೇತನ ಹಾಗೂ ವಸತಿ ರಹಿತರಿಗೆ ಸಹಾಯಧನ ವಿತರಣಾ ಸಮಾರಂಭವು ಸಂಸ್ಥೆಯ ಉಡುಪಿ ಮಳಿಗೆಯಲ್ಲಿ ನಡೆಯಿತು. ಮೀನುಗಾರಿಕೆ, ಬಂದರು ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ಮನೆ ಇಲ್ಲದಿರುವ ಸಾಕಷ್ಟು ಮಂದಿ ನಿರಾಶ್ರಿತರಿದ್ದಾರೆ. ಅಂತಹವರಿಗೆ ಮನೆ ನಿರ್ಮಿಸಿಕೊಡಲು ಸರ್ಕಾರಿ ಯೋಜನೆಯ ಹಣ ಬಹಳಷ್ಟು ಕಡಿಮೆ ಆಗುತ್ತದೆ ಎಂಬ ಅಭಿಪ್ರಾಯವೂ ಇದೆ. ಹಾಗಾಗಿ ಮಲಬಾರ್‌ ಗೋಲ್ಡ್‌ನಂತಹ ಸಂಸ್ಥೆಗಳು ಬಡವರಿಗೆ ಮನೆ ನಿರ್ಮಿಸಲು […]