ಮಕರ ಸಂಕ್ರಾಂತಿ ವಿಶೇಷ: ರೇಷ್ಮೆ ಜರಿಯ ಸಂಕ್ರಮಣ ಸಂಭ್ರಮ: ಮಗಳು ನೆನಪಿಸಿದ ಅಮ್ಮನ ಬಾಲ್ಯದ ನೆನಪು

“ನಾನು ಸಂಕ್ರಾಂತಿಗೆ ಜರಿ ಲಂಗ ತೊಟ್ಟು ಶಾಲೆಗೆ ಹೋಗುತ್ತೇನೆ. ಪೊಂಗಲ್‌ ಕುರಿತು ನನಗೆ ಭಾಷಣ ನೀಡಲು ಟೀಚರ್‌ ಹೇಳಿದ್ದಾರೆ’ ಎಂದು ಮಗಳು ಹೇಳಿದ್ದು ಕೇಳಿ ವಾರಕ್ಕೆ ಮೊದಲೇ ಮನೆಯಲ್ಲಿ ಹಬ್ಬದ ಸಡಗರ ಗರಿಗೆದರಿತು. ಜನವರಿ ತಿಂಗಳನ್ನು ಇಲ್ಲಿಯ ಶಾಲೆಗಳಲ್ಲಿ “ತಮಿಳು ಹೆರಿಟೇಜ್‌ ಮಂಥ್‌’ ಎಂದು ಆಚರಿಸುತ್ತಾರೆ. ಶಾಲಾ-ಕಾಲೇಜುಗಳಲ್ಲದೇ ಸ್ಥಳೀಯ ತಮಿಳು ಕೂಟಗಳು ಹಲವು ಕಾರ್ಯಕ್ರಮ, ಸ್ಪರ್ಧೆಗಳನ್ನು ಹಮ್ಮಿಕೊಳ್ಳುತ್ತವೆ. ಭಾರತ, ಶ್ರೀಲಂಕಾ ಮತ್ತು ಮಲೇಶಿಯಾದಿಂದ ಕೆನಡಾಕ್ಕೆ ವಲಸೆ ಬಂದ ತಮಿಳು ಜನಾಂಗದವರ ಕೊಡುಗೆ, ಸಂಸ್ಕೃತಿ, ಆಚಾರ-ವಿಚಾರ ಕುರಿತು ಇಲ್ಲಿಯ […]