ಮೈನವಿರೇಳಿಸುತ್ತಿದ್ದ ಆ ದೇಶಪ್ರೇಮ! ಎಲ್ಲಿದೆ ಈಗ ಕಂಡು ಕಾಣದೇ ಮರೆಮಾಚಿರುವಾಗ

ಭಾರತವನ್ನು ನಾವು ಹಬ್ಬಗಳ ದೇಶವೆಂದು ಕರೆಯುವುದನ್ನು ಕೇಳಿದ್ದೇವೆ. ಆಗಸ್ಟ್ ತಿಂಗಳು ಅಂದಾಕ್ಷಣನೇ ಹಬ್ಬಗಳ ಸುರಿಮಳೆಯೇ ಆಗುತ್ತದೆ. ನಾಗರ ಪಂಚಮಿ, ಶ್ರಾವಣ ಮಾಸ, ವರಮಾಹಾಲಕ್ಷ್ಮೀ ಇವೆಲ್ಲದರ ಮಧ್ಯೆ ರಾಷ್ಟ್ರೀಯ ಹಬ್ಬ ಸ್ವಾತಂತ್ರ್ಯ ದಿನಾಚರಣೆ ಹೌದು 15ನೇ ತಾರೀಖು ಬಂದ್ರೆ ಸಾಕು ಅವತ್ತು ಎಲ್ಲಿಲ್ಲದ ದೇಶ ಪ್ರೇಮ, ಆ ಬಿಳಿ ಶಾಲಾ ಸಮವಸ್ತ್ರದಲ್ಲಂತೂ ಅದೊಂದು ಗಾಂಭೀರ್ಯತೆ, ಆ ಹುಮಸ್ಸು, ಶಾಲಾ ಆವರಣವಂತೂ ಮದುವಣಗಿತ್ತಿಯಂತೆ ಅಲಂಕಾರಗೊಂಡು ನಾಚಿಕೆಯಿಂದ ನಗುತ್ತಿರುತ್ತಿತ್ತು, ಧ್ವಜಾರೋಹಣದಲ್ಲಿ ಅರಳುವ ಆ ಧ್ವಜದ ಮಧ್ಯೆ ಬೀಳುವ ಹೂವು ದಳಗಳು. ಅಬ್ಬಾ! […]