ಮಹರ್ಷಿ ವಾಲ್ಮೀಕಿ ಸಾಧನೆ ಸರ್ವರಿಗೂ ಪ್ರೇರಣೆ: ರಘುಪತಿ ಭಟ್

ಉಡುಪಿ: ಜಗತ್ತಿಗೆ ಮಹಾನ್ ಮಾನವೀಯ ಮೌಲ್ಯಗಳನ್ನುಳ್ಳ ಸಂದೇಶ ಸಾರುವ ರಾಮಾಯಣ ಮಹಾಕಾವ್ಯವನ್ನು ಬರೆದಂತಹ ಮಹರ್ಷಿ ವಾಲ್ಮೀಕಿ ನಿತ್ಯ ಸ್ಮರಣೀಯರು. ಇಚ್ಚಾಶಕ್ತಿ ಮತ್ತು ಕಠಿಣ ಪರಿಶ್ರಮದ ಮೂಲಕ ಅತ್ಯುನ್ನತ ಸಾಧನೆಗಳನ್ನು ಮಾಡಬಹುದು ಎನ್ನುವುದಕ್ಕೆ ವಾಲ್ಮೀಕಿ ಮಹರ್ಷಿಯೇ ಸಾಕ್ಷಿ. ದರೋಡೆಕೋರನಾಗಿದ್ದ ರತ್ನಾಕರ ಎಂಬ ವ್ಯಕ್ತಿ ನಾರದ ಮಹರ್ಷಿಗಳ ಪ್ರೇರಣೆಯಿಂದ ಕಠಿಣ ತಪಸ್ಸನ್ನಾಚರಿಸಿ, ಮಹರ್ಷಿಯಾಗಿ ರೂಪುಗೊಂಡು ರಾಮಾಯಣದಂತಹ ಮಹಾನ್ ಕಾವ್ಯ ರಚಿಸಿ ಆದಿಕವಿಯಾಗಿದ್ದು, ಅವರ ಈ ಸಾಧನೆ ಎಲ್ಲರಿಗೂ ಪ್ರೇರಣೆಯಾಗಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದರು. ಅವರು ಭಾನುವಾರ ಮಣಿಪಾಲ […]