ಮಹಾರಾಷ್ಟ್ರ: ವೈದ್ಯಕೀಯ ಲೋಕವನ್ನೇ ವಿಸ್ಮಯಗೊಳಿಸಿದ ಪ್ರಕರಣ 3 ದಿನದ ಗಂಡು ಮಗುವಿನ ಹೊಟ್ಟೆಯಿಂದ ಎರಡು ಭ್ರೂಣಗಳು ಹೊರಗೆ!

ಅಮರಾವತಿ/ಬುಲ್ಧಾನ: ವೈದ್ಯಕೀಯ ಲೋಕದ ವಿಸ್ಮಯಕ್ಕೆ ಸಾಕ್ಷಿ ಎಂಬಂತೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರಿಗೆ ಅತ್ಯಂತ ಅಪರೂಪದ ‘ಭ್ರೂಣದೊಳಗೆ ಭ್ರೂಣ’ ಇರುವುದು ಪತ್ತೆಯಾಗಿತ್ತು. ಕೆಲವೇ ದಿನಗಳಲ್ಲಿ ಹೆರಿಗೆಯ ನಂತರ ಆಕೆಯ ಮೂರು ದಿನದ ಮಗುವಿನ ಹೊಟ್ಟೆಯಿಂದ ಎರಡು ಭ್ರೂಣಗಳನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬುಲ್ಧಾನಾದ 32 ವರ್ಷದ ಮಹಿಳೆಯ ಗರ್ಭದಲ್ಲಿದ್ದ ಮಗುವಿನಲ್ಲಿ ಅತ್ಯಪರೂಪದ ಜನ್ಮಜಾತ ವೈಪರೀತ್ಯ ಪತ್ತೆಯಾಗಿದ್ದು, ಕಳೆದ ತಿಂಗಳು ನಿಯಮಿತ ಆರೋಗ್ಯ ತಪಾಸಣೆಯ ಭಾಗವಾಗಿ ಸೋನೋಗ್ರಫಿಗೆ ಒಳಗಾದಾಗ, ಭ್ರೂಣದ ದೇಹದೊಳಗೆ ವಿರೂಪಗೊಂಡ ಭ್ರೂಣಗಳಿರುವುದು ಪತ್ತೆಯಾಗಿದ್ದವು.ಫೆಬ್ರವರಿ […]